ವಾಸು : ಲೇ ಜ್ಯೋತಿ, ನಿನಗೇಕೆ ನನಗೆ ಪ್ರೇಮ ಪತ್ರ ಬರೆಯೊಲ್ಲ?
ಜ್ಯೋತಿ : ಏನಂತಾ ಬರೀಲಿ?
ವಾಸು : “ನಿಮ್ಮ ಕಾಲು ಭೂಮಿ ಮೇಲೆ ನಿಲ್ಲಬಾರದು ನೀವು ಆಕಾಶದಲ್ಲಿ ಹಾರಾಡ್ತಾ ಇರಬೇಕು” ಹಾಗೆ ಬರಿ.
ಜ್ಯೋತಿ : ಪತ್ರ ಬರಿಯೋದೇನು ಬೇಡ ನೀವು ಹಾಗೆ ಇರಲಿ ಅಂತ ನನ್ನಾಸೆ.
ವಾಸು : ಅದು ಹೇಗೆ?
ಜ್ಯೋತಿ : ನೀನು ಹಾಕೊಂಡ್ರಾಯ್ತು.
***
ವೆಂಕಿ : ಲೋ ವಾಸು ಅದೇನೋ ಪ್ರೇಮಿಗಳ ಪದ್ಯ ಬರೆದಿದ್ದೀನಿ ಅಂದ್ಯಲ್ಲ ಹೇಳು ಸ್ವಲ್ಪ.
ವಾಸು : ಅದಾ ಹೇಳ್ತೀನಿ ಕ್ಳು.
“ಫೋನ್ ಮಾಡಬೇಡಿ ಡಿಯರ್, ಫಾದರ್ ಇರ್ತಾರೆ ನಿಯರ್ ”
“ಮಾತನಾಡಲಾಗೋಲ್ಲ ಕಿಲ್ಲರ್, ವಿಷಯ ಗೊತ್ತಾದ್ರೆ ಪಿಯರ್ ”
“ಮೆಸೇಜ್ ಮಾಡು ಡಿಯರ್,ನಿನ್ನ ಜೊತೆ ಇರ್ತೀನಿ ಫಾರ್ ಎವರ್”
***
ಅಪ್ಪ : ಅಲ್ಲವೋ, ವಾಸು, ಯಾಕೋ ಯಾವಾಗ್ಲೂ ಕಾಲಿಗೆ ನೀರು ಹಾಕೋಳ್ತಾನೆ ಇರ್ತೀಯ?
ವಾಸು : ನೀವೇ ಹೇಳಿದ್ರಲ್ಲಪ್ಪಾ
ಅಪ್ಪ : ನಾನೆಲ್ಲೋ ಹೇಳಿದೆ?
ವಾಸು : ಅದೇ ಗಿಡದ ಬುಡಕ್ಕೆ ನೀರು ಹಾಕ್ತಾ ಇದ್ರೆ ಗಿಡ ಬೇಗ ಬೆಳೆಯುತ್ತೇ ಅಂತ.
ಅಪ್ಪ : ಅದಕ್ಕೆ
ವಾಸು : ನಾನೂ ಬೇಗ ಎತ್ತರವಾಗಬೇಕು ಅಂತ ಯಾವಾಗಲೂ ಕಾಲಿಗೆ ನೀರು ಹಾಕ್ಕೊಳ್ತೀನಿ.