ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವಾಸು : ಅಪ್ಪಾ ಈ ಮನೇಲಿ ಯಾರು ಬುದ್ಧಿವಂತರು?
ಅಪ್ಪ : ನಾನೇ ಬುದ್ಧಿವಂತ ಕಣೋ, ವಯಸ್ಸಿನಲ್ಲಿ ದೊಡ್ಡೋನು ನನಗೆ ಅನುಭವೂ ಜಾಸ್ತಿ.
ವಾಸು : ಅಮೇರಿಕಾ ಕಂಡುಹಿಡಿದದ್ದು ಯಾರು?
ಅಪ್ಪ : ಕೊಲಂಬಸ್
ವಾಸು : ಹಾಗಾದರೆ ಅವನಪ್ಪ ಏಕೆ ಕಂಡುಹಿಡಿಯಲಿಲ್ಲ, ನೀನು ಹಾಗೆ.

Join Our Whatsapp Group

ಡಾಕ್ಟರ್ : ಏನು ತೊಂದ್ರೆ ನಿಮಗೆ?
ವಾಸು : ಮೂತ್ರ ವಿಸರ್ಜನೆ ಮಾಡಲು ತುಂಬಾ ತೊಂದ್ರೆ ಡಾಕ್ಟರ್.
ಡಾಕ್ಟರ್ :ಪರೀಕ್ಷಿಸಿ ವಾಸು ನಿಮ್ಮ ಕಿಡ್ನಿ ಫೇಲ್ ಆಗಿದೆ.
ವಾಸು : ನೀವು ಸುಳ್ಳು ಹೇಳ್ತಾ ಇದ್ದೀರಿ ಡಾಕ್ಟರೇ.
ಡಾಕ್ಟರ್ : ಇಲ್ಲಾ ವಾಸು, ನಾನು ಹೇಳ್ತಾ ಇರೋದು ಸತ್ಯ.ನನ್ಮಾತ್ನ ಏಕೆ ನಂಬ್ತಾ ಇಲ್ಲಾ?
ವಾಸು : ಏಕೆಂದರೆ ನನ್ನ ಕಿಡ್ನಿ ಎಂದಿಗೂ ಶಾಲೆಗೆ ಹೋಗಿಲ್ಲ ಅಂದ್ಮೇಲೆ ಅದು ಹೇಗೆ ಫೇಲಾಗುತ್ತ ಹೇಳಿ?

ವಾಸು : ಲೇ ನಾನು ಅರ್ಜೆಂಟಾಗಿ ಎಲ್ಲಿಗೋ ಹೋಗ್ಬೇಕು ಹೋಗ್ತಾ ಇದ್ದೀನಿ.
ಜ್ಯೋತಿ : ಮತ್ತೆ ಊಟ?
ವಾಸು : ಅಲ್ಲೇ ಎಲ್ಲಾದ್ರೂ ಹೋಟೆಲ್ ನಲ್ಲಿ ಮಾಡ್ಕೊಳ್ತೀನಿ.
ಜ್ಯೋತಿ : ಒಂದೈದು ನಿಮಿಷ ತಾಳಿ.
ವಾಸು : ಐದು ನಿಮಿಷದಲ್ಲಿ ಅಡಿಗೆ ಆಗುತ್ತೇನೆ?
ಜ್ಯೋತಿ : ನಾನು ಬಟ್ಟೆ ಬದಲಿಸಿಕೊಂಡು ನಿಮ್ಮ ಜತೆಗೇ ಬರ್ತೀನಿ.