ಶಿಕ್ಷಕ : ವಾಸು ನೀನು ದೊಡ್ಡವನಾದ್ಮೇಲೆ ಏನ್ಮಾಡ್ತೀಯಾ?
ವಾಸು : ಗಡ್ಡ ಮೀಸೆ ಬಿಡ್ತೀನಿ.
ಶಿಕ್ಷಕ : ಅದೇಕೋ?
ವಾಸು : ಗಡ್ಡ ಮೀಸೆ ಇದ್ರೆ ಮುಖ ಸ್ವಲ್ಪ ಭಾಗ ಉಳಿಯುತ್ತೆ. ಅದ್ನ ತೊಳೆಯೋದು ಸುಲಭ.
***
ವೆಂಕಿ : ಅಂದ ಹಾಗೆ ವಾಸು ನಿಂಗೆ ಮದುವೆಯಾಗಿ ಎಷ್ಟು ವರ್ಷವಾಯ್ತೋ?
ವಾಸು : ಆಗ್ಲೇ 30 ವರ್ಷವಾಯ್ತು.
ವೆಂಕಿ : ಹಾಗಾದ್ರೆ ಮಕ್ಕಳೇಷ್ಟು?
ವಾಸು : ಕೇವಲ ಏಳು ಮಕ್ಕಳು.
ವೆಂಕಿ : ಹಾಲು ಕುಡಿಯೋ ಮಕ್ಕಳೂ ಇನ್ನೂ ಇದೆ ಅನ್ನು. ವಾಸು : ಇದೆ. ಅದೇ ಹೇಳ್ತೀನಿ ಕೇಳು.ನಾನು ರಾತ್ರಿ ಮಲಗಬೇಕಾದ್ರೆ 7ನೇ ಮಗುವಿಗೆ ಹಾಲಿನ ಪಾಠ ಕೊಡಬೇಕು.ಮೊದಲನೇ ಮಗನ ಕೈಯಿಂದ ಆಲ್ಕೋಹಾಲ್ ಕಿತ್ಕೋಬೇಕು.
***
ಜ್ಯೋತಿ : ಲೇ ಗಂಗಾ,ಒಂದು ಸಂತೋಷದ ಸಮಾಚಾರ.
ಗಂಗಾ : ಏನೇ ಅದೂ?
ಜ್ಯೋತಿ : ನನ್ನ ಗಂಡ ಇನ್ಮೇಲೆ ಕುಡಿಯೋದಿಲ್ಲಾ ಅಂತ ನನ್ನ ಪಾದ ಹಿಡಿದು ಪ್ರಮಾಣ ಮಾಡಿದ್ರು.
ಗಂಗಾ : ಆಮೇಲೆ ?
ಜ್ಯೋತಿ : ಆಮೇಲೆ ನೋಡ್ತೀನಿ, ನನ್ನ ಕಾಲಿನ ಗೆಜ್ಜೆಯೇ ಇರಲಿಲ್ಲ.