ವಾಸು : ಸರ್, ನಿಮ್ಮಿಂದ ಒಂದು ಸಹಾಯವಾಗಬೇಕು.
ಪೊಲೀಸ್ : ಏನಾಗ್ಬೇಕು?
ವಾಸು : ನೆನ್ನೆ ನಮ್ಮನೇಲಿ ಕಳ್ಳತನ ಮಾಡಿ ಸಿಕ್ಕಿದ್ನಲ್ಲ ಕಳ್ಳ ಅವನು ಸ್ವಲ್ಪ ಮಾತಾಡಿಸಬೇಕಿತ್ತು.
ಪೊಲೀಸರು : ಅವನು ಕಳ್ಳ ಅವನೊಡನೆ ಏನು ಮಾತು
ವಾಸು : ನನ್ನ ಹೆಂಡ್ತಿಗೆ ಎಚ್ಚರವಾದಾಗ ಹಾಗೆ ಹೇಗೆ ಮನೆಯೊಳಗೆ ಹೊಕ್ಕೋದು ಅಂತ.ಏಕೆಂದ್ರೆ ನಾನು ಅನೇಕ ವರ್ಷಗಳಿಂದ ಪ್ರಯತ್ನ ಮಾಡ್ತಾ ಇದ್ದೀನಿ, ಆಗ್ತಾ ಇಲ್ಲ.ಅದನ್ನೇ ಕೇಳ್ಬೇಕು.
ಜ್ಯೋತಿ : ಏನ್ರೀ? ಇವತ್ತೂ ಲೇಟಾ?
ಪಾಸು : ಏನ್ಮಾಡ್ಲಿ, ಇಸ್ವೀಟು ಆಡೋಕೆ ಕುಳುತ್ರೆ ಸಮಯ ಹೋಗೋದೇ ಗೊತ್ತಾಗೊಲ್ಲ.
ಜ್ಯೋತಿ : ಇಸ್ಪೀಟು ಆಡೋದನ್ನ ಬಿಡೀ ಅಂತ ಎಷ್ಟು ದಿನದಿಂದ ಹೇಳ್ತಾ ಇದ್ದೀನಿ.ಇದೆಲ್ಲಾ ಜುಜು ಕಣ್ರೀ.
ವಾಸು : ಅಂಥ ಧರ್ಮರಾಯನೇ ಜೂಜಾಡ್ತಾ ಇದ್ದ.ನಂದೇನು ಮಹಾ.
ಜ್ಯೋತಿ : ಆಯ್ತು ನೀವು ಇಸ್ಪೀಟು ಆಡಿ ಬೇಡ ಅನ್ನೋಲ್ಲ ದ್ರೌಪದಿಗೆ ಇದು ಜನ ಹೆಂಡತಿ ಅನ್ನೋದನ್ನ ಮರೀಬೇಡ.
ವೆಂಕಿ : ಯಾಕೋ ವಾಸು ಒಂದು ಥರಾ ಸಪ್ಪಗಿದ್ದೀಯ?
ವಾಸು : ನನ್ನ ಸ್ನೇಹಿತನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು 5 ಲಕ್ಷ ಕೊಟ್ಟಿದ್ದೆ.
ವೆಂಕಿ : ಈಗ ಈಸ್ಕೊಂಡಾಯ್ತಾ?
ವಾಸು : ಈಗ ಅವನು ಯಾರು ಅಂತ ಪತ್ತೆ ಮಾಡೋಕೆ ಆಗ್ತಾ ಇಲ್ಲ..