ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಗುಂಡ : ಬೇಡ ಮಹಾರಾಯಾ, ಅಷ್ಟೇಲ್ಲ ಹಣ ಖರ್ಚು ಮಾಡುವ ಮನಸ್ಸು ನನಗಿಲ್ಲ.!

 ಟೀಚರ್ : ಕಂಜೂಸ್ ಅಂದ್ರೆ ಏನು?

 ಮುನ್ನಾ : ನೂರು ಮೆಸೇಜ್ ರಿಸೀವ್ ಮಾಡಿಯೂ ಒಂದು ಮೆಸೇಜಿಗೂ ರಿಪ್ಲೈ ಮಾಡದೇ ಇರುವುದು.

 ಟೀಚರ್ : ಉದಾರಣೆ ಕೊಡು….

 ಮುನ್ನಾ : ಬೇರೆ ಯಾರೋ ಯಾಕೆ ನಿಮ್ಮ ಮಗಳೇ ಇದಕ್ಕೆ ದೊಡ್ಡ ಉದಾಹರಣೆ…!

Join Our Whatsapp Group

***

 ಇಂಗ್ಲಿಷ್ ಚಲನಚಿತ್ರವೊಂದನ್ನು ವೀಕ್ಷಿಸುತ್ತಿದ್ದ ಗುಂಡನನ್ನು ಪಕ್ಕದ ಮನೆಯ ಅಂಕಲ್ ಕೇಳಿದರು. “ಗುಂಡ ಇಂಗ್ಲಿಷ್ ಸಿನಿಮಾದ ಸಂಭಾಷಣೆ ಅರ್ಥವಾಗುತ್ತಾ?”

 ಗುಂಡ : ಹೌದು ಅಂಕಲ್, ಇದರಲ್ಲಿ ಥ್ಯಾಂಕ್ಸ್, ಯೆಸ್, ನೋ….. ಮುಂತಾದ ಕನ್ನಡದ ಶಬ್ದಗಳನ್ನೇ ಬಳಸೋದು…..

***

 ಸುಬ್ಬಿ : ನಾನು ಕಾಫಿ ಕಲರ್ ರೇಷ್ಮೆ ಸೀರೆ ತಗೊಂಡೆ ಮೀನಾಕ್ಷಿ.

 ಮೀನಾಕ್ಷಿ : ಹೌದೇನ್ರೀ?ಕಾಫಿ ಅಂದ್ರೆ ನೈಸ್ ಕೇಫೆನೋ ಅಥವಾ ಬ್ರೂ ಕಾಫೀನೋ?

 ಸುಬ್ಬಿ : ಸ್ಟ್ರಾಂಗ್ ಕಾಪಿ ಕಲರ್ ಕಣ್ರೀ….

 ಮೀನಾಕ್ಷಿ : ಗೊತ್ತಾಯ್ತು ಎಮ್ಮೆ ಹಾಲಿಗೆ ಕಾಫಿ ಪುಡಿ ಹಾಕಿದ ಬಣ್ಣ ಅನ್ನಿ.