ಆತ :ಹೆಂಡ್ತಿಗೆ ಸಿಟ್ ಬಂದಾಗ ಏನು ಮಾಡಬೇಕು?
ಈತ : ಮಾತನಾಡ್ದೆ ಸಿಟ್ ಮಾಡಬೇಕು.
ಆತ :ಏನು ಹೇಳ್ತಿದೀಯೋ,ಮಾತಾಡ್ದೆ ಸಿಟ್ ಮಾಡೋದು ಹೇಗೋ?
ಈತ : ಅಂದ್ರೆ ಅವಳಿಗೆ ಸಿಟ್ ಬಂದಾಗ ನೀನು ಮಾತನಾಡದೇ ಸುಮ್ಮನೆ ಸಿಟ್ ಮಾಡಬೇಕು ಅಂದ್ರೆ ಬಾಯಿ ಮುಚ್ಕೊಂಡ್ ಕೂತ್ಕೋಬೇಕು.
“ರಾಮಣ್ಣನಿಗೆ ಕಳೆದ ವರ್ಷ ಅಪಘಾತ ಆದಾಗ ಪುಢಾರಿ ಪಾಪಯ್ಯ ರಕ್ತದಾನ ಮಾಡಿದ್ದು ಜ್ಞಾಪಕ ಇದೆಯಾ? “
“ಹೌದು ಪಾಪಯ್ಯ ಅದೊಂದೇ ಒಳ್ಳೆ ಕೆಲಸ ಮಾಡಿದ್ದು”
“ಅದರೆ ಅದರಿಂದ ತೊಂದರೆ ಶುರುವಾಗಿದೆ.ರಾಮಣ್ಣ ಅಗಾಧವಾಗಿ ಸುಳ್ಳುಗಳು ಹೇಳೋಕೆ ಶುರು ಮಾಡಿದ್ದಾನಂತೆ. ಮೈಕ್ ಸಿಕ್ಕರೆ ಭಾಷಣ ಪ್ರಾರಂಭ ಮಾಡ್ತಾನಂತೆ!”
ಆತ : ಗಂಡ ಹೆಂಡತಿ ಸುಮಾರು 30 ವರ್ಷ ಒಟ್ಟಿಗೆದ್ದಾರೆ ಅಂದ್ರೆ ನಿಮಗೇನನ್ನಿಸುತ್ತೆ?
ಈತ : ಗಂಡನ್ನ ಕಂಡ್ರೆ ಅಯ್ಯೋ ಅನ್ನಿಸುತ್ತೆ.