ಜಗ್ಗು : ನಿನ್ನೆ ರಾತ್ರಿ ನನಗೂ ನನ್ನ ಹೆಂಡತಿಗೂ ಬಹಳ ಹೊತ್ತಿನವರೆಗೂ ವಾಗ್ಯುದ್ಧ ನಡೆದೇ ಇತ್ತು. ಕೊನೆಗೆ ನನ್ನದೇ ಕೊನೆಯ ಮಾತಾಯಿತು. ಬಾಯಿ ಮುಚ್ಚಿ ಸುಮ್ಮನೆ ಬಿದ್ದುಕೊಂಡಳು.
ಸುಬ್ಬ : ಏನೆಂದರೆ ನೀನು?
ಜಗ್ಗು : ಅಗಲಿ ಮಾರಾಯ್ತಿ. ಈಗ ಬಾಯಿ ಮುಚ್ಚು ಬೆಳಗಾಗಲಿ ತಂದುಕೊಡುತ್ತೇನೆ ಎಂದೆ.
ಹೆಣ್ಣು ಹೇಳಿತು : ಗಮ ಗಂಡಸೆಗೆ ಏನು ಹೇಳಿದರೂ ಅದು ಅವರ ಒಂದು ಕಿವಿಯಿಂದ ಹೊಕ್ಕು ಇನ್ನೊಂದರಿಂದ ಹೊರ ಹೋಗುವುದು.
ಗಂಡು ಹೇಳಿತು : ಹೆಂಗಸರಿಗೆ ಏನು ಹೇಳಿದರೂ ಅದು ಎರಡೂ ಕಿವಿಗಳಿಂದ ಒಳ ಹೊಕ್ಕು ಬಾಯಿಂದ ಹೊರಬೀಳುವುದು.
ಜಗ್ಗು : ಪೊಲೀಸ್ನವ್ರು, ನಿನ್ನನ್ನು ಯಾಕೆ ಅರೆಸ್ಟ್ ಮಾಡಿದ್ರು?
ಮುನ್ನಾ : ಬೇಗ ಶಾಪಿಂಗ್ ಮಾಡಿದ್ದಕ್ಕೆ.
ಜಗ್ಗು : ಬೇಗ ಅಂದ್ರೆ?ಎಷ್ಟು ಬೇಗ?
ಮುನ್ನಾ : ಅಂಗಡಿಯ ಓಪನ್ ಆಗುವ ಮುಂಚೆ……