ಅಂಗಡಿಯವ: ಸಾರ್, ಇದು ಇರುವೆ ಪೌಡರ್ ತಗೊಂಡು ಹೋಗಿ.
ನಾಣಿ: ಅದು ಬೇಡವೇ ಬೇಡ.
ಅಂಗಡಿಯವ: ಏಕೆ ಸಾರ್?
ನಾಣಿ: ಇವತ್ತು ಪೌಡರ್ ತಗೊಂಡು ಹೋಗಿ ಕೊಟ್ರೆ ನಾಳೆ ಸೆಂಟ್ ಕೇಳೊಲ್ಲಾ ಅನ್ನೋದೇನು ಗ್ಯಾರಂಟಿ?
ಮ್ಯಾನೇಜರ್: ನಾಣಿ ಶತ್ರುಗಳು ನಾಲ್ಕು ಕಡೆಗಳಿಂದಲೂ ಮುತ್ತಿದರೆ ಏನು ಮಾಡ್ತೀಯ?
ನಾಣಿ: ಅದು ಒಳ್ಳೆ ಸಮಯ ಸಾರ್, ಯಾವ ಕಡೆಗೆ ಬೇಕಾದರೂ ಗುಂಡು ಹಾರಿಸಬಹುದು.
ಸುಬ್ಬಿ: ಅಲ್ರೀ ರಾತ್ರಿ ಹೊತ್ತು ಯಾಕೆ ಊಟ ಬಿಟ್ರಿ?
ನಾಣೆ: ಹಣ ಉಳಿಸೋಕೆ. ಉಳಿಸೊದು ಕಲಿತರೆ ಗಳಿಸಬಹುದು. ಇವತ್ತು ನೀನು ಊಟ ಬಿಡು, ನಿನಗೆ 5 ರೂಪಾಯಿ ಕೊಡ್ತೀನಿ
ಸುಬ್ಬಿ: ಆಯ್ತು ರಾತ್ರಿ ಊಟ ಬಿಟ್ಟೆ, 5 ರೂ. ಕೊಡಿ. ಈಗ ತಿಂಡೀ ಕೊಡಿ.
ನಾಣಿ: ಈಗ ತಿಂಡೀ ತಿನ್ನೋರು 5 ರೂ. ಕೊಡೋಕು ಗೊತ್ತಾ?