ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಬ್ಬ: ಯಾಕೋ ನಾಣಿ ಇವತ್ತು ತುಂಬಾ ಮಂಕಾಗಿದೀಯ?
ನಾಣಿ: “ನಾಳೆ ನಮ್ಮನೇಲಿ ಯಾರೂ ಇರೋದಿಲ್ಲ ಖಂಡಿತಾ ಬನ್ನಿ” ಅಂತ ನನ್ನ ಲವರ್ ಫೋನ್ ಮಾಡಿದ್ದು.
ಸುಬ್ಬ: ಇದು ಸಂತೋಷದ ಸಮಾಚಾರ ತಾನೆ?
ನಾಣಿ: ನಿನಗೆ ಸಂತೋಷ ಅಷ್ಟೆ. ಇವತ್ತು ಮನೆಗೆ ಹೋದ್ರೆ ಯಾರೂ ಇರಲಿಲ್ಲ, ಮನೆಗೆ ಬೀಗ ಹಾಕಿತ್ತು.

Join Our Whatsapp Group

ಸುಬ್ಬಿ: ಇವತ್ತೇನಾಗುತ್ತೋ ನಾನೂ ನೋಡ್ತೀನಿ. ನಮ್ಮಮ್ಮನ ಮನೇಗೆ ಹೋಗೇ ಹೋಗ್ತಿನಿ.
ನಾಣಿ: ನೋಡು ನೋಡು, ನನ್ನ ಕೆರಳಿಸಬೇಡ. ಸಿಟ್ಟು ಬಂದ್ರೆ ನಾನು ಮನುಷ್ಯನಾಗಿರೊಲ್ಲ.
ಸುಬ್ಬಿ: ಕಂಡಿದ್ದೀನಿ ಸುಮ್ಮಿರಿ. ಈ ಬೆಕ್ಕಿನ ಮರಿಗೆ ಹೆದರೋಳಲ್ಲ ನಾನು.

ನಾಣಿ: ಡಿಯರ್, ನಿನ್ನೊಂದು ಪ್ರಶ್ನೆ ಕೇಳಲಾ?
ಸುಬ್ಬಿ: ಕೇಳಿ.
ನಾಣಿ: ನನಗೆ ಸಂತೋಷ ಮತ್ತು ದುಃಖ ಒಂದೇ ಬಾರಿ ಆಗುವಂತಹ ಒಂದು ಮಾತು ಹೇಳು?
ಸುಬ್ಬಿ: ನಿಮ್ಮ ಸ್ನೇಹಿತರಿಗಿಂತ ನೀವೇ ನನಗೆ ಚೆನ್ನಾಗಿ ಮುತ್ತಿಡ್ತೀರಿ.