ನಾಣಿ : ಸಾರ್ ನನಗೆ ಒಬ್ಬ ಜೀವ ಬೆದರಿಕೆ ಹಾಕಿದ.
ಪೊಲೀಸ್: ಯಾರೂ ಅಂತ ನಿಮಗೆ ಗೊತ್ತಾ? ಏನಂತ ಬೆದರಿಕೆ ಹಾಕಿದ?
ನಾಣಿ : ಅವನು ಯಾರೂ ಅಂತ ಗೊತ್ತೂ ಸಾರ್.
ಪೊಲೀಸ್: ಯಾರು ಹೇಳಿ?
ನಾಣಿ: ಅವರು ಕೆ.ಇ.ಬಿ. ಕಚೇರಿಯವರು. ಬಿಲ್ ಪಾವಿತಿಸದಿದ್ರೆ ಕತ್ತರಿಸಿ ಬಿಡ್ತೀನಿ ಅಂದ್ರು ಸಾರ್!
ಸುಬ್ಬಿ: ಚಿನ್ನದ ಬೆಲೆ ಏಕಿಷ್ಟು ಏರ್ತಾ ಇದೆ?
ನಾಣಿ: ಇದಕ್ಕೆಲ್ಲಾ ನೀನೇ ಕಾರಣ.
ಸುಬ್ಬಿ: ನಾನೇ ಮಾಡ್ಡೆ?
ನಾಣಿ: ಎಸ್.ಎಂ.ಎಸ್. ಕಳ್ಸೀ ಕಳ್ಸೀ ಅಂತ ಕೇಳ್ತಾ ಇದ್ದೆ. ನಾನೂ ನಿನಗೆ ಚಿನ್ನದಂತಹ ಎಸ್.ಎಂ.ಎಸ್. ಕಳ್ಸೀ… ಕಳ್ಸೀ… ಚಿನ್ನವೆಲ್ಲಾ ಮುಗಿದು ಹೋಯ್ತು.
ಸುಬ್ಬಿ: ರೀ, ನಾನು ನಿಮ್ಮ ಬಾಳಿನ ಪುಸ್ತಕ ಗೊತ್ತಾಯ್ತಾ?
ನಾಣಿ: ಅದೇ ನನಗೆ ಕಷ್ಟವಾದ್ದು. ನೀನು ಪುಸ್ತಕದ ಬದಲು ಕ್ಯಾಲೆಂಡರ್ ಆಗಿದ್ರೆ ಚನ್ನಾಗಿತ್ತು.
ಸುಬ್ಬಿ: ಏಕೆ?
ನಾಣಿ: ಪ್ರತೀ ವರ್ಷ ಬದಲಿಸಬಹುದಿತ್ತು.
ಸುಬ್ಬಿ: ರೀ ಮದುವೆಯಾದ ಹೊಸದರಲ್ಲಿ ಜಗತ್ತು ಅಂದ್ರೆ ನೀನೇ ಅಂತಾ ಇದ್ರಿ. ಅದೇ ಈಗ…
ನಾಣಿ: ಆಗಿನ್ನು ನಾನು ಭೂಗೋಳಶಾಸ್ತ್ರಾನ ಪೂರ್ಣ ಓದಿಲ್ಲಾ.