ನಾಣಿ: ನನಗೆ ಈ ಹುಡುಗಿಯನ್ನು ಕಂಡ್ರೆ ಆಗೋದಿಲ್ಲ. ಐ ಹೇಟ್ ದೆಮ್.
ಸುಬ್ಬಿ: ನನಗೂ ಅಷ್ಟೆ. ಈ ಹುಡುಗರನ್ನ ಕಂಡ್ರೆ ಆಗೋದಿಲ್ಲ.
ನಾಣಿ: ಅರೆ! ನಮ್ಮಿಬ್ಬರ ಮನಸ್ಪೂ ಒಂದೇ ರೀತಿ ಇದೆಯಲ್ಲಾ ನಾವೇಕೆ ಮದುವೆ ಆಗ್ತಾರೂ?
ಅಧ್ಯಾಪಕರು: ಕಿಟ್ಟೂ, ರಾಜರಾಮ ಮೋಹನ ರಾಯ್ ಯಾರೋ?
ಕಿಟ್ಟೂ; ಅವರು ನಾಲ್ಕು ಜನಾನೂ ಪ್ರಸಿದ್ದ ಸ್ನೇಹಿತರೇ ಅಲ್ಲವಾ, ಸಾರ್?
ಕುರುಡ: ಸ್ವಾಮಿ, ಎರಡೂ ಕಣ್ಣಿಲ್ಲ. ಏನಾದರೂ ಭಿಕ್ಷೆ ಹಾಕಿ.
ರಂಗರಾಯರು: ಭಿಕ್ಷೆ ಹಾಕಬಹುದು. ಆದರೆ ನಿನಗೆ ಕಣ್ಣಿಲ್ಲವೆಂದು ಹೇಗೆ ನಂಬುವುದು?
ಕುರುಡ: ಹಾಗಾದರೆ ನೋಡಿ, ಅಲ್ಲೊಂದು ಗೋಪುರ ಕಾಣುತ್ತಿದೆ ಅಲ್ಲವೇ?
ರಂಗರಾಯರು: ಹೌದು ಕಾಣುತ್ತಿದೆ.
ಕುರುಡ: ಅದು ನನಗೆ ಕಾಣುತ್ತಿಲ್ಲ!,
Saval TV on YouTube