“ಕೊಕ್ಕರೆ ಬೆಳ್ಳೂರಿಗೆ ವಲಸೆ ಬರೋ ಪಕ್ಷಿಗಳು ಯಾಕೆ ಹಾಗೆ ಹಿಂಡು ಹಿಂಡಾಗಿ ಹಾರಿ ಬರುತ್ತವೆ?” ಎಂಬ ಪ್ರಶ್ನೆಗೆ ಸ್ಕೂಲಿನಲ್ಲಿ ಪುಟ್ಟ ಕೊಟ್ಟ ಉತ್ತರ: “ಯಾಕಂದ್ರೆ ಅಷ್ಟು ದೂರ ಅವುಗಳಿಗೆ ನಡಕೊಂಡು ಬರೋಕೆ ಆಗೊಲ್ಲ!”
ಆಂಟೀ ಪಿಂಟುವನ್ನು ಒಂದು ಕೈನಲ್ಲಿ ಕೇರಂ ಆಡ್ತಾ ಇದ್ದದ್ದನ್ನು ನೋಡ್ತಾ ಕೇಳಿದಳು.
ಆಂಟೀ: ಮರೀ, ಇಲ್ಲಿ ಬಾರೋ, ನಿನಗೊಂದು ಸಿಹಿ ಮುತ್ತು ಕೊಡ್ತೀನಿ.
ಪಿಂಟು: ನನಗೆ ಅದು ಬೇಡ, ಚಾಕೊಲೇಟ್ ಕೊಟ್ರೆ ಬರ್ತೀನಿ.
ಆಂಟೀ: ಯಾಕೋ ಬೇಡ?
ಪಿಂಟು: ಅದ್ಯಾರಿಗೆ ಬೇಕು, ಶುಗರ್ ಲೆಸ್‌ಸು.
ಒಂದು ಆಫೀಸಿನಲ್ಲಿ ಹೊರಿಗಿನಿಂದ ಬಂದವನೊಬ್ಬ ಕೇಳಿದ. ಇಲ್ಲಿ ಸಿಗರೇಟು ಸೇದಬಹುದೇ?
ಬೇಕಾದಷ್ಟು ಸೇದಬಹುದು. ಆದರೆ ಒಂದಿಷ್ಟೂ ಹೊಗೆಯನ್ನು ಹೊರಗೆ ಬಿಡುವಂತಿಲ್ಲ!
Saval TV on YouTube