ಮನೆ ಅಪರಾಧ ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಹತ್ಯೆ ಮಾಡಿ ನದಿಗೆ ಎಸೆದ ಪತ್ನಿ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಹತ್ಯೆ ಮಾಡಿ ನದಿಗೆ ಎಸೆದ ಪತ್ನಿ

0

ಚಿಕ್ಕೋಡಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಪತ್ನಿ ಹತ್ಯೆ ಮಾಡಿ ಕೃಷ್ಣಾ ನದಿಗೆ ಎಸೆದಿರುವಂತಹ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಬಸ್ತವಾಡ ಗ್ರಾಮದ ಅಪ್ಪಾಸಾಬ ಅಲಿಯಾಸ್ ಮಚ್ಚೇಂದ್ರ ಓಲೇಕಾರ (45) ಕೊಲೆಯಾದ ಗಂಡ.

ಹೆಂಡತಿ ಸಿದ್ದವ್ವ ಓಲೇಕಾರ್ ಮತ್ತು ಪ್ರಿಯಕರ ಗಣಪತಿ ಕಾಂಬಳೆಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಜ.5ರಂದು ಸುಗಂಧಾದೇವಿ ದರ್ಶನಕ್ಕೆ ಹೋಗೋಣ ಅಂತಾ ಕರೆದುಕೊಂಡು ಬಂದಿದ್ದು, ಕೃಷ್ಣಾ ನದಿ ದಂಡೆ ಮೇಲೆ ಸ್ನಾನ ಮಾಡುವಾಗ ಪತ್ನಿ ಸಿದ್ದವ್ವ ಮತ್ತು ಗಣಪತಿಯಿಂದ ಕಲ್ಲಿನಿಂದ ಹೊಡೆದು ಮಚ್ಚೇಂದ್ರನನ್ನು ಹತ್ಯೆ ಮಾಡಲಾಗಿದೆ. ಕೊಂದ ಬಳಿಕ ಶವವನ್ನ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.

ನದಿಯಲ್ಲಿ ಶವ ಸಿಕ್ಕ ಬಳಿಕ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ರಾಯಬಾಗ ಪೊಲೀಸರು, ತನಿಖೆ ವೇಳೆ ಹೆಂಡತಿ ಮತ್ತು ಪ್ರಿಯಕರ ಕೊಲೆ ಮಾಡಿದ್ದು ಬಹಿರಂಗವಾಗಿದೆ. ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರ ಮುಂದೆ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ.