ಸುಬ್ಬ: ಲೋ ನಾಣಿ, ಒಂದು ಕಥೆ ಹೇಳಯ್ಯ
ನಾಣಿ: ಕಥೆ ಹೇಳೋದು ಸರಿ. ಕಥೆ ಹೇಗಿದ್ದೇಕು?
ಸುಬ್ಬ: ಅರ್ಧ ನಿಜ, ಅರ್ಧ ಸುಳ್ಳು. ಅಂಥ ಕಥೆ ಹೇಳು.
ನಾಣಿ: ಒಂದೂರಿನಲ್ಲಿ ಒಬ್ಬ ಪೊಲೀಸ್ ಅಧಿಕಾರಿಯಿದ್ದ, ಆತ ತುಂಬಾ ಪ್ರಾಮಾಣಿಕನಾಗಿದ್ದ.
ಮದ್ದೂ ಸ್ಕೂಲ್ ಮುಗಿದ ಮೇಲೆ ಕೈ ಖರ್ಚಿಗಾಗಿ ಉಡುಪಿ ಹೋಟಲಲ್ಲಿ ಮಾಣಿ ಆಗಿ ಕೆಲಸ ಮಾಡ್ತಿದ್ದ.
ಗಿರಾಕಿ: ಮಾಣಿ, ಏನೇನು ತಿಂಡಿ ಇದೆಯೋ
ಮದ್ದೂ: ದೋಸೆ, ಇಡ್ಲಿ, ಪೂರಿ, ಖಾರಾಬಾತ್, ಕೇಸರಿಬಾತ್ ಅಂತ ಮೊಳದುದ್ದ ಉಸಿರು ಕಟ್ಟಿಕೊಂಡು ಹೇಳಿ, ಕಡೆಗೆ ಸೇರಿಸಿದ ಇವು ಬಿಟ್ಟು ಮಿಕ್ಕಿದ್ದೆಲ್ಲಾ ಇದೆ ಸಾರ್.
ರಂಗ: ನೀವು ಇಬ್ಬರು ಹೆಂಡಿರನ್ನು ಹೇಗೆ ನಿಭಾಯಿಸುತ್ತೀರಿ?
ಮೋಹನ: ಎಲ್ಲಾ ಮೂರನೇ ಹೆಂಡತಿ ಹೇಳಿ ಕೊಡುವ ಐಡಿಯಾದಿಂದ.
ಗುರುಗಳು: ನಿನಗೆ ಯಾವ ಪ್ರಾಣಿ ಇಷ್ಟ?
ಸಮೀರ: ನನಗೆ ಬೆಕ್ಕು ಅಂದರೆ ಇಷ್ಟ.
ಗುರುಗಳು: ಥೂ! ಥೂ! ಅದ್ಯಾಕೋ ನಿನಗೆ ಇಷ್ಟ?
ಸಮೀರ: ಬೆಕ್ಕು ಅಡ್ಡ ಬಂದ್ರೆ ಶಾಲೆಗೆ ಹೋಗಬೇಡ ಎಂದು ನಮ್ಮ ಅಜ್ಜಿ ಹೇಳಿದ್ದಾರೆ, ಅದಕ್ಕೆ ಸಾರ್.
Saval TV on YouTube