ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಲಭದ್ದು
ಮೇಷ್ಟ್ರು : “ಎರಡು ಎರಡು ನಾಲ್ಕಾದ್ರೆ… ಎಂಟು ಎಂಟು ಎಷ್ಟು?”
ಶೀಲಾ : “ನೀವು ಯಾವಾಗೂ ಹೀಗೆ ಸುಲಭದ್ದು ನೀವು ಮಾಡಿ ಕಷ್ಟದ್ದು ನಮಗೆ ಕೇಳ್ತಿರಾ..?”

Join Our Whatsapp Group

ಕಣ್ಣಿಗೆ ಬಿದ್ದು
ಎಂಕ್ಟ : “ನನ್ನ ಹೆಂಡ್ತಿ ಕಣ್ಣಿಗೆ ಕಸ ಬಿದ್ದು ನೂರು ರೂಪಾಯಿ ಖರ್ಚಾಯ್ತು.”
ತಿಮ್ಮ : “ನನ್ನ ಹೆಂಡ್ತಿ ಕಣ್ಣಿಗೆ ರೇಷ್ಮೆ ಸೀರೆ ಬಿದ್ದು ನನಗೆ ಸಾವಿರ ರೂಪಾಯಿ ಖರ್ಚಾಯ್ತು.”

ನೀರಿಗೆ ಬರವೇ?
ಗುಂಡ ತನ್ನ ಅಮ್ಮನನ್ನು ಕೇಳಿದ “ಅಮ್ಮಾ ಅಕ್ಕನ ಊರಿನಲ್ಲಿ ನೀರಿಗೆ ತುಂಬಾ ಬರುವೆ?”
ಅಮ್ಮ ಕೇಳಿದ್ಲು “ಯಾಕೆ ಮಗು?”
ಗುಂಡ ಹೇಳಿದ “ಮತ್ತೆ ನಿನ್ನ ಫೋನಿನಲ್ಲಿ ಹೇಳಿದ್ಲು ನಾನು ಇಲ್ಲಿ ಕಣ್ಣೀರಿನಲ್ಲೇ ಕೈ ತೊಳೆಯುತ್ತಿರುವೆ”