ಪ್ರಶ್ನೆ: 6 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಮೀಟರ್ ಮಣ್ಣು ಇದೆ?
ಗುಂಡ: ಸೊನ್ನೆ
***
ಪ್ರಶ್ನೆ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ?
ಗುಂಡ: ಹಾಕಿದರೆ ಒಡೆಯುತ್ತದೆ ಅದಕ್ಕೆ
**
ಪ್ರಶ್ನೆ: ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ ಏನು ಹಾಕಬೇಕು?
ಗುಂಡ: ಕೈ ಹಾಕಬೇಕು
***
ಪ್ರಶ್ನೆ: ನೀನು ಈಜುವುದನ್ನು ಎಲ್ಲಿ ಕಲಿತೆ?
ಗುಂಡ: ನೀರಿನಲ್ಲಿ














