ಇಬ್ಬರು ಸ್ನೇಹಿತರು ವಾಕಿಂಗ್ ಹೊರಟಿದ್ದರು. ಒಬ್ಬರ ಮೊಬೈಲ್ ಫೋನ್ ರಿಂಗಾಯಿತು. ಅವನು ತುಂಬಾ ಮೆತ್ತೆಗೆ ಮಾತನಾಡಿ ಮುಗಿಸಿದ. ಯಾರದು ಫೋನ್ ಎಂದು ಗೆಳೆಯ ಕೇಳಿದಕ್ಕೆ ಹೆಂಡತಿಯದು ಎಂದ. ಹೆಂಡತಿಯ ದಾದರೆ ಏಕಿಷ್ಟು ಮೆಲ್ಲಗೆ ಮಾತಾನಾಡುತ್ತೀಯಾ. ಎಂದು ಪ್ರಶ್ನಿಸಿದ. ಆಗ ಮೊದಲನೆಯವ ಅದು ನಿನ್ನ ಹೆಂಡತಿಯದು ಎಂದ.
“ದೇವರು ನಿಜವಾಗಿಯೂ ತುಂಬ ಬುದ್ಧಿವಂತ ಹಾಗೂ ದೂರ ದೃಷ್ಟಿಉಳ್ಳವನು. ಏಕೆಂದರೆ ಮನುಷ್ಯನನ್ನು ನಿರ್ಮಾಣ ಮಾಡುವಾಗ ಆಗ ಕನ್ನಡಕ ಇರದಿದ್ದಾಗ ಅದೆಷ್ಟು ಸರಿಯಾಗಿ ಕಣ್ಣುಗಳ ಹಿಂದೆ ಕಿವಿಗಳನ್ನು ಇಟ್ಟಿದ್ದ ನೋಡು!” ಎಂದು ಕಿಟ್ಟಿ ತನ್ನ ಗೆಳೆಯನಿಗೆ ಹೇಳಿತ್ತಿದ್ದ.!
ಪ್ರಶ್ನೆ : ಯುವಕರಿಗೂ ಮುದುಕರಿಗೂ ಏನು ವ್ಯತ್ಯಾಸ?
ಉತ್ತರ : ‘ಯುವಕರ ಜೇಬಿನಲ್ಲಿ ಹುಡುಗಿಯರ ದೂರವಾಣಿ ನಂಬರ್ ಮತ್ತು ವಿಳಾಸವಿರುತ್ತವೆ, ಮುದುಕರ ಜೇಬಿನಲ್ಲಿ ಡಾಕ್ಟರರ ದೂರವಾಣಿ ನಂಬರ್ ಮತ್ತು ವಿಳಾಸವಿರುತ್ತದೆ.’