ಮನೆ ಮನರಂಜನೆ ಜೂನಿಯರ್ ಎನ್ ಟಿಆರ್ ಜನ್ಮದಿನ: 31ನೇ ಚಿತ್ರ ‘ದೇವರ’ ಟೈಟಲ್ ರಿಲೀಸ್

ಜೂನಿಯರ್ ಎನ್ ಟಿಆರ್ ಜನ್ಮದಿನ: 31ನೇ ಚಿತ್ರ ‘ದೇವರ’ ಟೈಟಲ್ ರಿಲೀಸ್

0

ಇಂದು ಜೂನಿಯರ್ ಎನ್​ಟಿಆರ್​ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಅವರ 30ನೇ ಸಿನಿಮಾದ ಟೈಟಲ್ ಅನ್ನು ಬಿಡುಗಡೆ ಮಾಡಲಾಗಿದೆ.

Join Our Whatsapp Group

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ ಟಿಆರ್ ಕೈ ಜೋಡಿಸುತ್ತಾರೆ ಎಂಬ ವಿಚಾರ ಈ ಮೊದಲೇ ಅಧಿಕೃತ ಆಗಿತ್ತು. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘NTR 31’ ಎಂದು ಶೀರ್ಷಿಕೆ ಇಡಲಾಗಿತ್ತು. ಜೂನಿಯರ್​ ಎನ್ ​ಟಿಆರ್ ಬರ್ತ್​ಡೇ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ ‘ದೇವರ’ ಎನ್ನುವ ಟೈಟಲ್ ಇಡಲಾಗಿದೆ. 2024ರ ಮಾರ್ಚ್​​ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ ಎಂದು ಪೋಸ್ಟರ್​​ ನಲ್ಲಿ ತಿಳಿಸಲಾಗಿದೆ.

ಸದ್ಯ ಪ್ರಶಾಂತ್ ನೀಲ್ ಅವರು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಿವೆ. ಈ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂಬುದು ಈ ಮೊದಲೇ ಘೋಷಣೆ ಆಗಿದೆ. ಈ ಚಿತ್ರ ರಿಲೀಸ್ ಆದ ಬಳಿಕ ಐದು ತಿಂಗಳ ಗ್ಯಾಪ್ ಸಿಗಲಿದೆ. ಆಗ ಪ್ರಶಾಂತ್ ನೀಲ್ ಅವರು ಹೊಸ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ.

ಈಗ ‘ಸಲಾರ್’ ಮೂಲಕ ಅವರು ಪ್ರೇಕ್ಷಕರು ಎದುರು ಬರಲು ರೆಡಿ ಆಗುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಬಂದ ಬಳಿಕ ಅವರ ಖ್ಯಾತಿ ಹೆಚ್ಚೋದು ಪಕ್ಕಾ ಎನ್ನಲಾಗುತ್ತಿದೆ. ಆ ಬಳಿಕ ಅವರು ಜೂನಿಯರ್ ಎನ್ ​ಟಿಆರ್ ಜೊತೆ ಕೈ ಜೋಡಿಸಲಿದ್ದಾರೆ. ಈ ಚಿತ್ರ ಸಖತ್ ಆ್ಯಕ್ಷನ್​ ನಿಂದ ಕೂಡಿರಲಿದೆ ಎಂದು ವರದಿ ಆಗಿದೆ.

ಹಿಂದಿನ ಲೇಖನಸಿದ್ದರಾಮಯ್ಯ, ಡಿಕೆಶಿಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ
ಮುಂದಿನ ಲೇಖನಕರ್ನಾಟಕ: ಸೋಮವಾರದಿಂದ 3 ದಿನಗಳ ವಿಶೇಷ ಅಧಿವೇಶನ: ಹಂಗಾಮಿ ಸಭಾಧ್ಯಕ್ಷರಾಗಿ ಆರ್ ವಿ ದೇಶಪಾಂಡೆ