ಮನೆ ಸುದ್ದಿ ಜಾಲ ವಿಶ್ವದ ಪ್ರಭಾವಿ 30 ಭಾಷೆಗಳಲ್ಲಿ ಕನ್ನಡವು ಒಂದಾಗಿದೆ: ಎಲ್ ನಾಗೇಂದ್ರ

ವಿಶ್ವದ ಪ್ರಭಾವಿ 30 ಭಾಷೆಗಳಲ್ಲಿ ಕನ್ನಡವು ಒಂದಾಗಿದೆ: ಎಲ್ ನಾಗೇಂದ್ರ

0

ಮೈಸೂರು(Mysuru): ಪ್ರಪಂಚದಲ್ಲಿ ಒಟ್ಟು 9000 ಭಾಷೆಗಳು ಇದ್ದೋ, ಇದರಲ್ಲಿ 4500 ಭಾಷೆಗಳು ನಶಿಸಿ ಹೋಗಿವೆ. ಉಳಿದ 4500 ಭಾಷೆಗಳಲ್ಲಿ 30 ಭಾಷೆಗಳು ಪ್ರಪಂಚದ ಪ್ರಭಾವಿ ಭಾಷೆಗಳು ಇವುಗಳಲ್ಲಿ ಕನ್ನಡವು ಒಂದಾಗಿದೆ ಎಂಬುದು ನಮ್ಮ ಹೆಮ್ಮೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ ಅವರು ತಿಳಿಸಿದರು.

ಇಂದು ಕರ್ನಾಟಕ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ “ಮೂಲ ಸಂಸ್ಕೃತಿ – ಕನ್ನಡ ಸಂಸ್ಕೃತಿ” ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದು 20  ದಿನಗಳ ತರಬೇತಿ ಶಿಬಿರ. ಕನ್ನಡದ ಮೂಲ ಸಂಸೃತಿ ನೋಡಿದಾಗ ಪ್ರಾಚೀನ ಸಂಸ್ಕೃತಿ ಇರುವ ಬಾಷೆ ಕನ್ನಡ. ಮುಂದಿನ ಪೀಳಿಗೆಗೆ ಸಂಸ್ಕೃತಿಯ ಬಗ್ಗೆ ತಿಳಿಸಲು ಶಿಬಿರ ಆಯೋಜಿಸಲಾಗಿದೆ. ನಮ್ಮ ದೇಶದ ಪರಂಪರೆ ಇತಿಹಾಸವನ್ನು ಮರೆಯಬಾರದು. ಮೈಸೂರು ದಸರಾವನ್ನು ಮುಂದಿನ ಪೀಳಿಗೆಗೆ ನೀಡಲು ಆಚರಣೆ ಮಾಡುತ್ತೇವೆ. ಕಾಡಿನ ಜನ ನಗರ ಪ್ರದೇಶಗಳಿಗೆ ಬರಲು ಇಷ್ಟ ಪಡುವುದಿಲ್ಲ, ಕಾರಣ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟು ಬರಲು ಇಷ್ಟ ಪಡುವುದಿಲ್ಲ. ಬುಡಕಟ್ಟು ಮಹಿಳೆಯನ್ನು ದೇಶದ  ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇದು ನಮ್ಮ ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯದ ಪ್ರತೀಕ.  ಕಾಡಿನ ಜನ ಅನೇಕ ವಸ್ತುಗಳನ್ನು ತಯಾರಿಸಿ ನೀಡುತ್ತಾರೆ. ಅವರ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದ ಅವರು ತರಬೇತಿಯನ್ನು ಉತ್ತಮವಾಗಿ ಪಡೆಯಿರಿ ಎಂದು ಶಿಬಿರಾರ್ಥಿಗಳಿಗೆ  ಕಿವಿಮಾತು ಹೇಳಿದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು ಮಾತನಾಡಿ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರ್ಕಾರ 5 ಕಲೆ ಪ್ರಕಾರಗಳ ಕುರಿತು 20 ದಿನಗಳ ತರಬೇತಿ ನೀಡುತ್ತಿದೆ.  ಜನರಿಗೆ ಮನ ಮುಟ್ಟುವಂತೆ ಹೇಳುವುದು ಜಾನಪದ ಕಲೆಗಳ ಮೂಲಕ. ತತ್ವ ಪದ, ತಂದೂರಿ ಪದಗಳು ಇಂದು ನಶಿಸಿ ಹೋಗುತ್ತಿವೆ. ಈ ಕಲೆಗಳು  ವಿದ್ಯೆಗಿಂತ ಹೆಚ್ಚು. ಈ ಕಲೆಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಬೆಳೆಸಬೇಕು ಎಂದರು.

ಅಪರ ಜಿಲ್ಲಾಧಿಕಾರಿಗಳಾದ ಆರ್ ಲೋಕನಾಥ್ ಅವರು ಮಾತನಾಡಿ ನಶಿಸಿ ಹೋಗುತ್ತಿರುವ ಕಲೆಗಳನ್ನು ಮುಂದಿನ ಪೀಳಿಗೆಗೆ ನಾವು ತಲುಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯ್ಷರಾದ ಗೋವಿಂದರಾಜು, ಕಾರ್ಮಿಕ ಸಹಾಯಕ ಆಯುಕ್ತರಾದ ನಜಿಯಾ ಸುಲ್ತಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಎಂ ಡಿ ಸುದರ್ಶನ್,

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ನಂಜಯ್ಯ ಹೊಂಗನೂರು, ಹಿರಿಯ ರಂಗಕರ್ಮಿ ಗಳಾದ ವೈ ಎಂ ಪುಟ್ಟಣ್ಣಯ್ಯ, ಹಿರಿಯ ತಂಬೂರಿ ನೀಲಗಾರ ಕಲಾವಿದರಾದ ಡಾ. ಮೈಸೂರು ಗುರುರಾಜ್, ಹಿರಿಯ ಜಾನಪದ ಕಲಾವಿದರಾದ ದೇವರಾಜು ಸೇರಿದಂತೆ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಹಿಂದಿನ ಲೇಖನಲಂಚ ಪ್ರಕರಣ: ಇಬ್ಬರು ಅಧಿಕಾರಿಗಳಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಕರ್ನಾಟಕ ನ್ಯಾಯಾಲಯ
ಮುಂದಿನ ಲೇಖನಮೈಸೂರು: ಲೇಖಕ ಮಹೇಶ್ ಚಂದ್ರಗುರು ಭಾಷಣಕ್ಕೆ ಆಕ್ರೋಶ