ಬೆಂಗಳೂರು : ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದು ಕನ್ನಡಿಗ ಬಸವರಾಜ ಕೆಂಪವಾಡ ಅವರು ಅನನ್ಯ ಸಾಧನೆ ಮಾಡಿದ್ದಾರೆ. ಇನ್ನೂ ಇದೇ ಪರೀಕ್ಷೆಯಲ್ಲಿ 14ನೇ ರ್ಯಾಂಕ್ ಪಡೆದ ದೀಕ್ಷಿತ್.ಎನ್ ಅವವರು ರಾಜ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅವರಿಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.
ಐಎಫ್ಎಸ್ ಪರೀಕ್ಷೆಯಲ್ಲಿ ಸಾಧನೆ ತೋರಿದ ಕನ್ನಡಿಗರ ಕುರಿತು ಸಿದ್ದರಾಮಯ್ಯ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. ‘ಕನ್ನಡಿಗರ ಪರಿಶ್ರಮ, ಪ್ರಯತ್ನ ಮತ್ತು ಆತ್ಮವಿಶ್ವಾಸವಿದ್ದರೆ ಕಠಿಣಾತಿ ಕಠಿಣ ಗುರಿಯನ್ನು ಕೂಡ ಮುಟ್ಟಲು ಸಾಧ್ಯವೆಂಬುದಕ್ಕೆ ಇವರ ಸಾಧನೆಯೇ ಸಾಕ್ಷಿ. ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸುವಲ್ಲಿ ನಿಮ್ಮ ಪ್ರತಿಭೆ, ಶ್ರದ್ಧೆಯಿಂದ ರಾಷ್ಟ್ರಕ್ಕೆ ಗರಿಷ್ಠ ಅನುಕೂಲವಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಇವರ ಸಾಧನೆ ಸ್ಪೂರ್ತಿದಾಯಕ – ಈ ಇಬ್ಬರ ಸಾಧನೆಯು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಮತ್ತು ಸ್ಪೂರ್ತಿದಾಯಕವಾದುದ್ದು. ಮತ್ತೊಮ್ಮೆ ವಿಶಿಷ್ಟ ಸಾಧನೆಗೈದ ಯುವ ಕನ್ನಡಿಗರಿಗೆ ಹೃತ್ಪೂರ್ವಕ ಅಭಿನಂದನೆ’ ಎಂದು ಫೋಟೋ ಸಮೇತ ಸಿಎಂ ಶುಭ ಹಾರೈಸಿದ್ದಾರೆ.
















