ಮನೆ ರಾಜ್ಯ ಕೊಡಗು: ನಿವೃತ್ತ ಅರಣ್ಯಾಧಿಕಾರಿ ಆತ್ಮಹತ್ಯೆ

ಕೊಡಗು: ನಿವೃತ್ತ ಅರಣ್ಯಾಧಿಕಾರಿ ಆತ್ಮಹತ್ಯೆ

0

ಕೊಡಗು(Kodagu): ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಶಾಲನಗರ ತಾಲ್ಲೂಕಿನ ಬಸವನತ್ತೂರಿನಲ್ಲಿ ಗ್ರಾಮದಲ್ಲಿ ನಡೆದಿದೆ.

ಟಿ.ವಿ.ಶಶಿ (80) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಅರಣ್ಯಾಧಿಕಾರಿ.

ಆರಣ್ಯ ಇಲಾಖೆಯಿಂದ ನಿವೃತ್ತಿ ಹೊಂದಿದ ನಂತರ ನಿದ್ರಾಹೀನತೆಯ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬಂಧ ಹಲವು ಕಡೆದ ಆಸ್ಪತ್ರೆಗಳಿಗೆ ತೋರಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ . ಇದರಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಕೊಡಗಿನ‌ ವಿವಿಧೆಡೆ ರೇಂಜರ್ ಆಗಿ ಶಶಿಧರ್ ಸೇವೆ ಸಲ್ಲಿಸಿದ್ದರು. ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಎರಡು ದಶಕಗಳಿಂದ ಭಾರತದಲ್ಲಿ ಅಕ್ರಮ ವಾಸ: ಗುಜರಿ ಅಂಗಡಿ ಮಾಲೀಕನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌
ಮುಂದಿನ ಲೇಖನಚಾಮುಂಡಿ ಬೆಟ್ಟ ಸೇರಿದಂತೆ 15 ಕಡೆ ರೋಪ್ ವೇ ಯೋಜನೆ