ಮನೆ ಅಪರಾಧ ಮೈಸೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ; ಎನ್ಆರ್ ಕ್ಷೇತ್ರದಲ್ಲಿ ವ್ಯಕ್ತಿಯ ಕೊಲೆ

ಮೈಸೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ; ಎನ್ಆರ್ ಕ್ಷೇತ್ರದಲ್ಲಿ ವ್ಯಕ್ತಿಯ ಕೊಲೆ

0

ಮೈಸೂರು : ಉದಯಗಿರಿಯ ಕೆ.ಎನ್. ಪುರದಲ್ಲಿ ಮುಂಜಾನೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೈಸೂರಿನ ಗೌಸಿಯ ನಗರದ ನಿವಾಸಿ ಕೂಲಿ ಕಾರ್ಮಿಕ ಮೊಹಮ್ಮದ್ ಉಮರ್ ಎಂದು ಗುರುತಿಸಲಾಗಿದೆ.

ಮೊಹಮ್ಮದ್ ಉಮರ್ ಕೆ ಎನ್ ಪುರ ದಿಂದ ನಡೆದುಕೊಂಡು ಬರುವ ವೇಳೆ ಉದಯಗಿರಿ ಠಾಣೆಯ ಅನಾತಿ ದೂರದಲ್ಲಿ ದುಷ್ಕರ್ಮಿಗಳು ಮೊಹಮ್ಮದ್ ಉಮರ್ನನ್ನು ಅಡ್ಡಗಟ್ಟಿ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ ಎಂಧು ವರದಿಯಾಗಿದೆ.

ಬೆಳ್ಳಂ ಬೆಳಗ್ಗೆ ಕೊಲೆಯಾಗಿ ರಕ್ತದ ಮಡಿಲಿನಲ್ಲಿ ಮಲಗಿರುವ ವ್ಯಕ್ತಿಯನ್ನು ನೋಡಿ ಸ್ಥಳೀಯರಲ್ಲಿ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಉದಯಗಿರಿ ಪೊಲೀಸರು ಸ್ಥಳ ಪರಿಶೀಲಿಸಿ ಶವವನ್ನು ಸರ್ಕಾರಿ ಮೆಡಿಕಲ್ ಕಾಲೇಜ್ ಶವಗಾರಕ್ಕೆ ಸಾಗಿಸಿ ದುಷ್ಕರ್ಮಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.