ಮನೆ ಅಂತಾರಾಷ್ಟ್ರೀಯ ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಬಾಂಬ್ ದಾಳಿ: 20 ಮಂದಿ ಸಾವು, 30ಕ್ಕೂ ಅಧಿಕ ಮಂದಿಗೆ ಗಾಯ

ಪಾಕಿಸ್ತಾನದ ರೈಲು ನಿಲ್ದಾಣದಲ್ಲಿ ಬಾಂಬ್ ದಾಳಿ: 20 ಮಂದಿ ಸಾವು, 30ಕ್ಕೂ ಅಧಿಕ ಮಂದಿಗೆ ಗಾಯ

0

ಪೆಶಾವರ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Join Our Whatsapp Group

 ರೈಲು ಫ್ಲಾಟ್‌ಫಾರಂಗೆ ಆಗಮಿಸುವುದಕ್ಕೂ ಮುನ್ನ ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ‍ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

 ಜಾಫರ್ ಎಕ್ಸ್‌ಪ್ರೆಸ್‌ ಬೆಳಿಗ್ಗೆ 9 ಗಂಟೆಗೆ ಫ್ಲಾಟ್‌ಫಾರಂನಿಂದ ನಿರ್ಗಮಿಸಬೇಕಿತ್ತು. ಆದರೆ ಅದರ ಆಗಮನ ತಡವಾಗಿತ್ತು ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಸಂಭವಿಸುವ ವೇಳೆ ರೈಲು ಇನ್ನೂ ಫ್ಲಾಟ್‌ಫಾರಂಗೆ ಬಂದಿರಲಲ್ಲ. ನಿಲ್ದಾಣದಲ್ಲಿ ಸಾಮಾನ್ಯ ಜನಸಂದಣಿಯೇ ಇತ್ತು. ಸ್ಫೋಟದ ಪ್ರಮಾಣ ಹೆಚ್ಚಿದ್ದರಿಂದ ಸಾವು–ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.