ಮನೆ ಸ್ಥಳೀಯ ಮುಡಾ ಹಗರಣ ತನಿಖೆ ನಡುವೆಯೇ 300 ಹೊಸ ಖಾಸಗಿ ಲೇಔಟ್​ ಗಳಿಗೆ ಅನುಮತಿ: ಶಾಸಕ ಶ್ರೀವತ್ಸ

ಮುಡಾ ಹಗರಣ ತನಿಖೆ ನಡುವೆಯೇ 300 ಹೊಸ ಖಾಸಗಿ ಲೇಔಟ್​ ಗಳಿಗೆ ಅನುಮತಿ: ಶಾಸಕ ಶ್ರೀವತ್ಸ

0

ಮೈಸೂರು: ಮುಡಾ ಹಗರಣದ  ತನಿಖೆ ನಡುವೆಯೇ 300 ಹೊಸ ಖಾಸಗಿ ಲೇಔಟ್ ​ಗಳಿಗೆ ಮುಡಾ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ.

Join Our Whatsapp Group

ಲೋಕಾಯುಕ್ತ ಅಧಿಕಾರಿಗಳ ತನಿಖೆ ನಡುವೆ ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಮಾಡಲಾಗಿದೆ. ಮುಡಾ ಪ್ರಭಾರ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಮಾಡಲಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು ಭಾಗಿಯಾಗಿದ್ದರು.

ಮುಡಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಶ್ರೀವತ್ಸ, ಸಭೆಯಲ್ಲಿ 50:50 ಅನುಪಾತದ ಬಗ್ಗೆ ಮಹತ್ವದ ಚರ್ಚೆಯಾಗಿಲ್ಲ. ಹೊಸ ಲೇಔಟ್​​ಗಳ ಅನುಮತಿ ಬಗ್ಗೆ ಚರ್ಚಿಸಿ ಒಪ್ಪಿಗೆ ನೀಡಿದ್ದೇವೆ. ದೇಸಾಯಿ ಆಯೋಗದ ವರದಿ ಆಧಾರದ ಮೇಲೆ 50-50 ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಚಾಮರಾಜ ಕಾಂಗ್ರೆಸ್​ ಶಾಸಕ ಹರೀಶ್ ಗೌಡ ಪ್ರತಿಕ್ರಿಯಿಸಿದ್ದು, 50:50 ಅನುಪಾತದಲ್ಲಿ ಹಂಚಿಕೆಯಾಗಿದ್ದ ಸೈಟ್​​ಗಳ ಲೆಕ್ಕ ಸಿಕ್ಕಿಲ್ಲ. ಅಕ್ರಮ ಸೈಟ್, ಸಕ್ರಮ ಸೈಟ್ ಬೇರ್ಪಡಿಸುವುದೇ ಕಷ್ಟವಾಗಿದೆ. ಕಳೆದ ಸಭೆಯಲ್ಲಿ 4 ಸಾವಿರ ಸೈಟ್ ಬಗ್ಗೆ ಮಾಹಿತಿ ಕಲೆಹಾಕಿದ್ದೆ. ಈಗ ಆ ಸಂಖ್ಯೆಯು ಇನ್ನೂ ಹೆಚ್ಚಳವಾಗುತ್ತಿದೆ ಎಂದಿದ್ದಾರೆ.

ಮುಂದಿನ ಪ್ರಾಧಿಕಾರದ ಸಭೆಯಲ್ಲಿ 50:50 ಅನುಪಾತದ ಬಗ್ಗೆಯೇ ಪ್ರತ್ಯೇಕವಾದ ಚರ್ಚೆ ಮಾಡಲು ತೀರ್ಮಾನಿಸಲಾಗಿದೆ. 50:50 ಅನುಪಾತದಲ್ಲಿ ಹಗರಣವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಲ್ಲಿ ಮುಚ್ಚಿಡುವುದು ಏನು ಇಲ್ಲ ಎಂದು ಹೇಳಿದ್ದಾರೆ.

240 ಬಡಾವಣೆ ಹಸ್ತಾಂತರ

ಇನ್ನು ಮುಡಾದಿಂದ ಬಡಾವಣೆಗಳ ಹಸ್ತಾಂತರ ಪ್ರಕ್ರಿಯೆ ವಿಚಾರವಾಗಿ ಮೊದಲ ಹಂತದ ಹಸ್ತಾಂತರ ಪ್ರಕ್ರಿಯೆ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 240 ಬಡಾವಣೆ ಹಸ್ತಾಂತರ ಮಾಡಲಾಗಿದೆ. ಮೈಸೂರು ಪಾಲಿಕೆ ಹೂಟಗಳ್ಳಿ ನಗರಸಭೆ ಬೋಗಾದಿ ಶ್ರೀರಾಂಪುರ ರಮ್ಮನಹಳ್ಳಿ ಪಟ್ಟಣ ಪಂಚಾಯತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಉಳಿದ 700 ಬಡಾವಣೆಗಳು ಡಿಸೆಂಬರ್ ಅಂತ್ಯದೊಳಗೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ.