ಮನೆ ರಾಷ್ಟ್ರೀಯ ದೆಹಲಿ: ಜುಲೈ 1ರಿಂದ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧ

ದೆಹಲಿ: ಜುಲೈ 1ರಿಂದ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧ

0

ನವದೆಹಲಿ (New Delhi): ಜುಲೈ 1ರಿಂದ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಲು ದೆಹಲಿ ಪರಿಸರ ಇಲಾಖೆ ನಿರ್ಧರಿಸಿದೆ.

ಜುಲೈ 1ರಿಂದ 19 ವಿಧದ ಏಕಬಳಕೆ ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಲು ನಿರ್ಧರಿಸಲಾಗಿದ್ದು, ನಿಯಮ ಉಲ್ಲಂಘಿಸುವ ಪ್ಲಾಸ್ಟಿಕ್‌ ಉತ್ಪಾದನೆ, ವಿತರಣೆ, ದಾಸ್ತಾನು ಮತ್ತು ಮಾರಾಟ ಘಟಕಗಳನ್ನು ಮುಚ್ಚಲು ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಕ್ಕೊಳಗಾಗುವ 19 ವಿಧದ ಏಕಬಳಕೆ ಪ್ಲಾಸ್ಟಿಕ್‌ಗಳಲ್ಲಿ ಇಯರ್‌ಬಡ್‌, ಧ್ವಜ, ಕ್ಯಾಂಡಿ ಕಡ್ಡಿ, ಐಸ್‌ಕ್ರೀಮ್‌ ಕಡ್ಡಿ, ಥರ್ಮೋಕೊಲ್, ಪ್ಲೇಟ್‌, ಲೋಟ, ಫೋರ್ಕ್‌, ಚಮಚ, ಸ್ಟ್ರಾ, ಟ್ರೇ, ಚಾಕು, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕ್‌, 100 ಮೈಕ್ರಾನ್‌ ಒಳಗಿನ ಪ್ಲಾಸ್ಟಿಕ್‌ ಅಥವಾ ಪಿವಿಸಿ ಬ್ಯಾನರ್‌ಗಳು ಸೇರಿವೆ.

ಹಿಂದಿನ ಲೇಖನಜೂ.23 ರಂದು ಜನಸಂಪರ್ಕ ಸಭೆ
ಮುಂದಿನ ಲೇಖನಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ