ಮನೆ ಸುದ್ದಿ ಜಾಲ ಸರ್ಕಾರದ ಬದ್ಧತೆ ಪುನರುಚ್ಛರಿಸಿದ ಪ್ರಧಾನಿ ಮೋದಿ : ವಿಶ್ವ ಪರಿಸರ ದಿನ

ಸರ್ಕಾರದ ಬದ್ಧತೆ ಪುನರುಚ್ಛರಿಸಿದ ಪ್ರಧಾನಿ ಮೋದಿ : ವಿಶ್ವ ಪರಿಸರ ದಿನ

0

ನವದೆಹಲಿ: ಇಂದು ವಿಶ್ವ ಪರಿಸರ ದಿನ. ಈ ದಿನದ ಅಂಗವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕಳೆದೊಂದು ದಶಕದಿಂದ ಪರಿಸರ ರಕ್ಷಣೆಯಲ್ಲಿ ಸರ್ಕಾರ ತೆಗೆದುಕೊಂಡ ವಿವಿಧ ಪ್ರಯತ್ನಗಳ ಬಗ್ಗೆ ಹೇಳಿದ್ದಾರೆ. ಹಸಿರು ವಿಸ್ತರಣೆ ಮತ್ತು ಪ್ರಾಣಿಗಳ ಸಂಖ್ಯೆ ಹೆಚ್ಚಳವು ಸರ್ಕಾರವು ಪರಿಸರವನ್ನು ಉಳಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ. ಪರಿಸರ ರಕ್ಷಣೆಯಲ್ಲಿ ಸಾಮೂಹಿಕ ಪ್ರಯತ್ನಗಳು, ನೀತಿಗಳು, ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ನಂಬಿಕೆ ಹೇಗೆ ಸುಧಾರಿಸಬಹುದು ಎಂಬುದನ್ನು ನಾವು ನಾಗರಿಕರಿಗೆ ತೋರಿಸಿಕೊಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ವಿಶ್ವ ಪರಿಸರ ದಿನದಂದು ಪ್ರತಿಯೊಬ್ಬರಿಗೂ ಶುಭಾಶಯ ಕೋರಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರನ್ನು ನಾನು ಪ್ರಶಂಸಿಸುತ್ತೇನೆ. ಪರಿಸರ ರಕ್ಷಣೆ ಮತ್ತು ಸುಸ್ಥಿರ ಬೆಳವಣಿಗೆ ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಲು ಈ ದಿನವು ಒಂದು ಅತ್ಯುತ್ತಮ ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ. ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಕಳೆದ ಒಂದು ದಶಕದಲ್ಲಿ ನಮ್ಮ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ದೇಶದ ಕೆಲವು ಪ್ರಮುಖ ಯಶಸ್ಸುಗಳಲ್ಲಿ ಹಸಿರು ಹೊದಿಕೆಯ ವಿಸ್ತರಣೆ ಮತ್ತು ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಾಗುವಂತೆ ನೋಡಿಕೊಳ್ಳುವುದು ಕೂಡಾ ಒಂದಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸರ್ಕಾರವು ಪ್ರಾಣಿಗಳ ಸಂರಕ್ಷಣೆ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾತನಾಡಿರುವ ಅವರು, ನಾವು ಭಾರತೀಯರು ನಮ್ಮ ಜೀವವೈವಿಧ್ಯತೆಯ ಬಗ್ಗೆ ಹೆಮ್ಮೆ ಪಡಬೇಕಿದೆ. ನಮ್ಮ ವೈವಿಧ್ಯ ಪರಿಸರ ವ್ಯವಸ್ಥೆ ಅಗಣಿತ ಜೀವಗಳು ಮತ್ತು ಜೀವನೋಪಯಗಳನ್ನು ಬೆಂಬಲಿಸುತ್ತಿದೆ. ಗ್ರೇಟ್ ಇಂಡಿಯನ್ ಬಸ್ಟರ್ಡ್, ಹಿಮ ಚಿರತೆಗಳು, ಕರಡಿಗಳು ಮತ್ತು ಚಿರತೆಗಳ ಸಂರಕ್ಷಣಾ ಪ್ರಯತ್ನಗಳು ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ನಿರಂತರ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಹಾಗೂ ತಾಯಿಯ ಹೆಸರಲ್ಲಿ ಒಂದು ಮರ ಎಂಬ ಉಪಕ್ರಮವು ಪರಿಸರ ರಕ್ಷಣೆಗೆ ಗಮನಾರ್ಹ ಕೊಡುಗೆ ನೀಡಿದೆ.

ಪ್ರತಿವರ್ಷ ಇದರಿಂದ 1.19 ಲಕ್ಷ ಹೆಕ್ಟೇರ್​ ಕಾಡು ವಿಸ್ತರಿಸುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮತ್ತು ಕ್ರಮಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 1973ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವನ್ನು ಆಯೋಜಿಸಲು ಹಸಿರು ನಿಶಾನೆ ತೋರಿಸಿತ್ತು. ಪರಿಸರ ಸಮಸ್ಯೆಗಳ ಕುರಿತು ಸಾರ್ವಜನಿಕ ಸಂಪರ್ಕಕ್ಕಾಗಿ ವಿಶ್ವದಾದ್ಯಂತ ಲಕ್ಷಾಂತರ ಜನರು ಆಚರಿಸುವ ಅತಿದೊಡ್ಡ ಜಾಗತಿಕ ವೇದಿಕೆ ಈ ದಿನವಾಗಿದೆ. 2026ರಲ್ಲಿ ಈ ಕಾರ್ಯಕ್ರಮವನ್ನು ಅಜೆರ್ಬೈಜಾನ್ ಆಯೋಜಿಸುತ್ತಿದೆ ಎನ್ನಲಾಗುತ್ತಿದೆ.