ಮನೆ ಸುದ್ದಿ ಜಾಲ ರಂಜಾನ್‌ ಹಿನ್ನೆಲೆ ಪರೀಕ್ಷೆ ಮುಂದೂಡಿಕೆ; ಮಂಗಳವಾರವೂ ಮೃಗಾಲಯ ಓಪನ್‌

ರಂಜಾನ್‌ ಹಿನ್ನೆಲೆ ಪರೀಕ್ಷೆ ಮುಂದೂಡಿಕೆ; ಮಂಗಳವಾರವೂ ಮೃಗಾಲಯ ಓಪನ್‌

0

ಮೈಸೂರು (Mysuru)- ರಂಜಾನ್‌ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ  (Mysuru university) ಪರೀಕ್ಷೆಗಳನ್ನು ಮುಂದೂಡಿದೆ.

ಮೇ 2 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಮೇ 7ಕ್ಕೆ ಮುಂದೂಡಿ ಪರೀಕ್ಷಾಂಗ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ. ಕಾನೂನು ಪದವಿ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳು ಮುಂದೂಡಿಕೆಯಾಗಿದೆ.

ಮಂಗಳವಾರವೂ ಮೃಗಾಲಯ ಓಪನ್‌:

ಬಸವ ಜಯಂತಿ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯ (Mysuru Zoo) ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ಮೃಗಾಲಯಕ್ಕೆ ಪ್ರತಿ ಮಂಗಳವಾರ ರಜೆ ಇರುತ್ತಿತ್ತು. ಮೇ 3 ರಂದು ರಂಜಾನ್‌, ಬಸವ ಜಯಂತಿ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಮಂಗಳವಾರ ರಜೆಯನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಮೃಗಾಲಯ ಆದೇಶ ಹೊರಡಿಸಿದೆ.

ಪ್ರವಾಸಿಗರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರವೂ ಮೃಗಾಲಯ ಮತ್ತು ಕಾರಂಜಿ ಕೆರೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ಹಿಂದಿನ ಲೇಖನಉಕ್ರೇನ್‌ ನಿಂದ ವಾಪಾಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜೆಎಸ್‌ ಎಸ್‌ ನಿಂದ ಬ್ರಿಡ್ಜ್‌ ಕೋರ್ಸ್‌
ಮುಂದಿನ ಲೇಖನಸರ್ಕಾರ ಸತ್ತು ಹೋಗಿದೆ, ಸಿಎಂ, ಗೃಹ ಸಚಿವರು ಅಶಕ್ತರು: ಸಿದ್ದರಾಮಯ್ಯ