ಮನೆ ಮನರಂಜನೆ ರಾಮ್‌ಚರಣ್‌ ಹುಟ್ಟುಹಬ್ಬ:  ʼಗೇಮ್‌ ಚೇಂಜರ್‌ʼ  ಚಿತ್ರದ ʼಜರಗಂಡಿʼ ಹಾಡು ಬಿಡುಗಡೆ

ರಾಮ್‌ಚರಣ್‌ ಹುಟ್ಟುಹಬ್ಬ:  ʼಗೇಮ್‌ ಚೇಂಜರ್‌ʼ  ಚಿತ್ರದ ʼಜರಗಂಡಿʼ ಹಾಡು ಬಿಡುಗಡೆ

0

ಹೈದರಾಬಾದ್: ಮೆಗಾ ಪವರ್‌ ಸ್ಟಾರ್‌ ರಾಮ್‌ ಚರಣ್‌ ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟುಹಬ್ಬದಂದು ಅವರು ಪತ್ನಿಯ ಜೊತೆ ತಿರುಪತಿ ಭೇಟಿ ನೀಡಿ ದೇವರ ದರ್ಶನವನ್ನು ಪಡೆದಿದ್ದಾರೆ.

ಇತ್ತ ಅವರ ಬಹು ನಿರೀಕ್ಷಿತ ʼಗೇಮ್‌ ಚೇಂಜರ್‌ʼ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ. ಆ ಮೂಲಕ ಫ್ಯಾನ್ಸ್‌ ಗಳಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.

ʼಜರಗಂಡಿʼ ಎನ್ನುವ ಹಾಡನ್ನು ರಿಲೀಸ್‌ ಮಾಡಲಾಗಿದೆ. ಲಿರಿಕಲ್‌ ವಿಡಿಯೋ ಹಾಡಿನಲ್ಲಿ ನಾಯಕಿ ಕಿಯಾರ ಹಾಗೂ ನಟ ರಾಮ್‌ ಚರಣ್‌ ಅವರು ಹೆಜ್ಜೆ ಹಾಕಿರುವುದನ್ನು ತೋರಿಸಲಾಗಿದೆ.

ಎಸ್‌ ಎಸ್ ಥಮನ್ ಸಿನಿಮಾಕ್ಕೆ ಮ್ಯೂಸಿಕ್‌ ನೀಡಿರುವ ಹಾಡು ಫ್ಯಾನ್ಸ್‌ ಗಳಿಗೆ ಡ್ಯಾನ್ಸ್‌ ನಂಬರ್‌ ಆಗಿ ಮೂಡಿಬರುವುದು ಪಕ್ಕಾ ಎನ್ನುವಂತಿದೆ ಹಾಡಿನ ಬೀಟ್.

ಎನರ್ಜಿ ಹಾಡಿಗೆ ದಲೇರ್ ಮೆಹಂದಿ ಮತ್ತು ಸುನಿಧಿ ಚೌಹಾಣ್ ಅವರು ಧ್ವನಿಯಾಗಿದ್ದಾರೆ. ಅನಂತ ಶ್ರೀರಾಮ್ ಅವರು ಸಾಹಿತ್ಯವನ್ನು ಬರೆದಿದ್ದಾರೆ. ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಸಿರೀಶ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದ್ದು, ಕಾರ್ತಿಕ್ ಸುಬ್ಬರಾಜ್ ಚಿತ್ರದ ಕಥೆ ಬರೆದಿದ್ದಾರೆ. ರಾಮ್‌ ಚರಣ್ ಐಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂಜಲಿ, ಸಮುದ್ರಕಣಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನೀಲ್, ನವೀನ್ ಚಂದ್ರ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

ರಾಮ್‌ ಚರಣ್‌ ಇತ್ತೀಚೆಗೆ ಬುಚ್ಚಿ ಬಾಬು ಸನಾ ಅವರ ʼಆರ್‌ ಸಿ16ʼ ಸಿನಿಮಾದ ಮುಹೂರ್ತವನ್ನು ಮುಗಿಸಿದ್ದಾರೆ. ಇದಾದ ಬಳಿಕ ಅವರು ʼಪುಷ್ಪ- ಖ್ಯಾತಿಯ ಸುಕುಮಾರ್‌ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ.

ಹಿಂದಿನ ಲೇಖನಹಾಸನ: ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮುಖಂಡರ ನಡುವೆ ಕಿತ್ತಾಟ
ಮುಂದಿನ ಲೇಖನಎಂ. ಲಕ್ಷ್ಮಣ್ ಗೆದ್ದರೆ ನಾನೇ ಗೆದ್ದ ಹಾಗೆ: ಸಿಎಂ ಸಿದ್ದರಾಮಯ್ಯ