ಮನೆ ಅಪರಾಧ ಗೋವಾ ರೆಸಾರ್ಟ್ ನಲ್ಲಿ ರಷ್ಯಾ ಬಾಲಕಿ ಮೇಲೆ ಅತ್ಯಾಚಾರ: ಗದಗ್ ನಲ್ಲಿ ಆರೋಪಿ ಬಂಧನ

ಗೋವಾ ರೆಸಾರ್ಟ್ ನಲ್ಲಿ ರಷ್ಯಾ ಬಾಲಕಿ ಮೇಲೆ ಅತ್ಯಾಚಾರ: ಗದಗ್ ನಲ್ಲಿ ಆರೋಪಿ ಬಂಧನ

0

ಬೆಂಗಳೂರು(Bengaluru): ಉತ್ತರ ಗೋವಾದ ಅರಂಬೋಲ್ ನ ರೆಸಾರ್ಟ್ ವೊಂದರಲ್ಲಿ 12 ವರ್ಷದ ರಷ್ಯಾದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಗದಗದಲ್ಲಿ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ರವಿ ಲಮಾಣಿ ಬಂಧಿತ ಆರೋಪಿಯಾಗಿದ್ದಾನೆ.

ಮೇ 6 ರಂದು ಗೋವಾದ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ತಾಯಿ ಮೇ 9 ರಂದು ದೂರು ದಾಖಲಿಸಿದ್ದರು. ನಂತರ ಮೇ 10 ರಂದು  ವಿವಾಹಿತ ರವಿ ಲಮಾಣಿಯನ್ನು ಗದಗ್ ನಲ್ಲಿ ಪೆರ್ನೆಮ್ ಪೊಲೀಸರ ತಂಡವೊಂದು ಬಂಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ರೆಸಾರ್ಟ್ ನ ಸ್ವೀಮ್ಮಿಂಗ್ ಫೂಲ್ ಹಾಗೂ ಹೋಟೆಲ್ ನಲ್ಲಿ ಕೊಠಡಿಯಲ್ಲಿ ಕೊಠಡಿ ಪರಿಚಾರಕಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಆಕೆಯ ತಾಯಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ 24 ಗಂಟೆಯೊಳಗೆ ಆತನನ್ನು ಗದಗ್ ನಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಪೆರ್ನೆಮ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿಕ್ರಮ್ ನಾಯಕ್ ತಿಳಿಸಿದ್ದಾರೆ. 

ಆರೋಪಿ ರವಿ ಲಮಾಣಿ ವಿರುದ್ಧ ಐಪಿಸಿ ಸೆಕ್ಷನ್ 376( ಅತ್ಯಾಚಾರ) ಗೋವಾ ಬಾಲಕರ ಕಾಯ್ದೆಯ ಸೆಕ್ಷನ್ 8 ಮತ್ತು ಪೋಕ್ಸೊ ಕಾಯ್ಡೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ. 

ಹಿಂದಿನ ಲೇಖನಡಾ.ಪಿ.ರವೀಂದ್ರನಾಥ್ ರಾಜೀನಾಮೆಗೆ ಎಂ.ಪಿ.ರೇಣುಕಾಚಾರ್ಯ ಪ್ರಕರಣ ಕಾರಣ: ಡಿಕೆಶಿ ಆರೋಪ
ಮುಂದಿನ ಲೇಖನಮುಖ್ಯಮಂತ್ರಿ ಭೇಟಿ ಮಾಡಿದ ಸ್ಪೀಕರ್ ಬಸವರಾಜ ಹೊರಟ್ಟಿ