ಮನೆ ರಾಜ್ಯ ಸಾರಿಗೆ ಬಸ್‌ ಗೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ

ಸಾರಿಗೆ ಬಸ್‌ ಗೆ ಆಗ್ರಹಿಸಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ

0

ಪಾಂಡವಪುರ: ಸಮರ್ಪಕ ಸಾರಿಗೆ ಬಸ್‌ಗೆ ಆಗ್ರಹಿಸಿ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಶನಿವಾರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.

Join Our Whatsapp Group


ದೊಡ್ಡಬ್ಯಾಡರಹಳ್ಳಿ ಗ್ರಾಮದ ಮಂಡ್ಯ-ಪಾಂಡವಪುರ ಮುಖ್ಯರಸ್ತೆ ಬಳಿ ಜಮಾಹಿಸಿದ ವಿದ್ಯಾರ್ಥಿನಿ ಯರು ಮಂಡ್ಯದಿಂದ ಪಾಂಡವಪುರ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿ ಸಾರಿಗೆ ಅಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಮಂಡ್ಯ-ಪಾಂಡವ ಪುರದ ಬಸ್ ಸಂಚಾರದಲ್ಲಿ ಅಸ್ತವ್ಯಸ್ಥ ಉಂಟಾಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಡ್ಯ ಡಿಪೋ ಮೇನೆಜರ್ ರಘು ಅವರನ್ನು ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡರು.


ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವಂತ ಸಾರಿಗೆ ಬಸ್‌ಗಳು ಬೆಳಿಗ್ಗೆ ಹಾಗೂ ಸಂಜೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ.ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನಾನೂಕೂಲ ಉಂಟಾಗುತ್ತಿದೆ.ಬೆಳಿಗ್ಗೆ ೭ ಗಂಟೆಗೆ ಬಿಟ್ಟರೆ ೯.೩೦ವರೆಗೂ ಸರಿಯಾಗಿ ಸಾರಿಗೆ ಬಸ್ ಬರೋದಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗೋದು ತಡವಾಗುತ್ತಿದೆ. ಜತೆಗೆ ಸಂಜೆ ಸಮಯದಲ್ಲೂ ಸಹ ಬಸ್‌ಗಳ ತೊಂದರೆ ಉಂಟಾಗುತ್ತಿದೆ, ಕಳೆದ ಮೂರು ತಿಂಗಳಿದಲೂ ಸಹ ಇದೇರೀತಿ ಬಸ್ ಸಮಸ್ಯೆ ಉಂಟಾಗುತ್ತಿದೆ. ಜತೆಗೆ ವಿದ್ಯಾರ್ಥಿಗಳು ಬಸ್‌ಗೆ ನಿಲ್ಲಿಸುವಂತೆ ಕೈಹೊಡೆದರೂ ಕೆಲವು ಸಾರಿಗೆ ಬಸ್ ನವರು ಬಸ್‌ಗಳನ್ನು ನಿಲ್ಲಿಸದೆ ಹೋಗುತ್ತಿದ್ದಾರೆ. ಈ ಬಗ್ಗೆ ಅಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್ ನಿಲ್ದಾಣದಲ್ಲಿ ಇರುವ ಟಿಸಿಗಳು ವಿದ್ಯಾರ್ಥಿಗಳ ಮೇಲೆ ಅಸಭ್ಯವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.


ಫ್ರೀಬಸ್ ವಿರುದ್ದವೂ ಆಕ್ರೋಶ: ಪ್ರತಿಭಟನೆನಿರತ ವಿದ್ಯಾರ್ಥಿನಿ ಯರು ರಾಜ್ಯ ಸರಕಾರದ ಶಕ್ತಿ ಯೋಜನೆ ವಿರುದ್ದವೂ ಆಕ್ರೋಶ ಹೊರಹಾಕಿದರು.
ಶಕ್ತಿ ಯೋಜನೆಯಿಂದ ಬಸ್ ತುಂಬ ರಶ್ ಆಗುತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸರಕಾರ ಶಕ್ತಿ ಯೋಜನೆ ಜಾರಿಗೊಳಿಸಿ ಹೆಚ್ಚಿನ ಬಸ್‌ಗಳನ್ನು ನೀಡಿಲ್ಲ ಇದರಿಂದ ವಿದ್ಯಾರ್ಥಿಗಳು ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಸರಕಾರ ಶಕ್ತಿ ಯೋಜನೆ ನಿಲ್ಲಿಸಿ, ವಿದ್ಯಾರ್ಥಿಗಳಿಗೆ ಫ್ರೀಕೊಟ್ಟು ಅನುಕೂಲ ಮಾಡಿಕೊಡಿ ಎಂದು ಆಗ್ರಹಿಸಿದರು.


ಬಳಿಕ ಪಾಂಡವಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ತೆರಳಿದ ಸಾರಿಗೆ ಅಕಾರಿಗಳನ್ನು ಬಸ್ ನಿಲ್ದಾಣದ ಟಿಸಿಯನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿನೆ ಮಾಡುವಂತೆ ಸೂಚನೆ ನೀಡಿದರು.


ಮಂಡ್ಯ ಡಿಪೋ ಮೇನೆಜರ್ ರಘಯ ಮಾತನಾಡಿ, ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ ಅನುಕೂಲವಾಗುವಂತೆ ಬಸ್‌ಗಳನ್ನು ನಿಯೋಜನೆ ಮಾಡಲಾಗುವುದು. ಈ ರೀತಿಯ ತೊಂದರೆ ಎದುರಾಗದಂತೆ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.


ಪ್ರತಿಭಟನೆಯಲ್ಲಿ ವಿದ್ಯಾರ್ಥಿಯರಾದ ನಿತ್ಯಶ್ರೀ, ದೀಕ್ಷಿತ, ಕೃಪಶ್ರೀ,ಕೃತಿಕ, ರಂಜಿತ, ಪ್ರೀತಿ, ದಿವ್ಯ, ರೋಹಿಣಿ,ವರ್ಷ, ಸುಚಿತ್ರ, ಚಂದನ, ಅಂಜು, ಚಂದನ, ಸೌಮ್ಯ,ಪ್ರೀತಿ, ಸುಜಿ,ಸಾನ್ವಿ, ಮುಖಂಡ ಗ್ರಾಪಂ ಮಾಜಿ ರವಿ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಹಾಜರಿದ್ದರು.