ಮನೆ ಆರೋಗ್ಯ ನೆನೆಸಿಟ್ಟ ಒಣದ್ರಾಕ್ಷಿ ತಿಂದ್ರೆ ಬಿಪಿ ಕಂಟ್ರೋಲ್’ಗೆ ಬರುತ್ತೆ, ಮೂಳೆ ಗಟ್ಟಿಯಾಗುತ್ತೆ!

ನೆನೆಸಿಟ್ಟ ಒಣದ್ರಾಕ್ಷಿ ತಿಂದ್ರೆ ಬಿಪಿ ಕಂಟ್ರೋಲ್’ಗೆ ಬರುತ್ತೆ, ಮೂಳೆ ಗಟ್ಟಿಯಾಗುತ್ತೆ!

0

ನೋಡಲು ದಪ್ಪ ಉದ್ದ ಇರುವವರೆಲ್ಲ ಫಿಟ್ ಅಂಡ್ ಫೈನ್ ಎಂದು ಹೇಳಲು ಸಾಧ್ಯವಿಲ್ಲ. ದೇಹದ ಒಳಗಿನ ಆರೋಗ್ಯ ಯಾರಿಗೆ ಚೆನ್ನಾಗಿರುತ್ತದೆ ಅಂತಹವರು ನಿಜವಾದ ಆರೋಗ್ಯ ಭಾಗ್ಯ ಪಡೆದ ವ್ಯಕ್ತಿ ಎನಿಸಿಕೊಳ್ಳುತ್ತಾರೆ.

ಅಂದರೆ ದೇಹದ ಎಲ್ಲಾ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿರಬೇಕು, ದೇಹದಲ್ಲಿ ಕೊಲೆಸ್ಟ್ರಾಲ್ ಇರಬಾರದು, ಮೈಕೈ ನೋವು ಬರಬಾರದು, ಬಿಪಿ, ಶುಗರ್ ಕಂಟ್ರೋಲ್ ನಲ್ಲಿ ಇರಬೇಕು ಹೀಗೆ ಹಲವಾರು ಕಾರಣಗಳು ಒಬ್ಬ ವ್ಯಕ್ತಿಯನ್ನು ಫಿಟ್ ಅಂಡ್ ಫೈನ್ ಎಂದು ಕರೆಯಲು ಸಾಧ್ಯವಾಗುತ್ತವೆ.

ಇದಕ್ಕೆ ಸಂಬಂಧಪಟ್ಟಂತೆ ಆಹಾರ ಪದ್ಧತಿ ಚೆನ್ನಾಗಿದ್ದರೆ ಒಳ್ಳೆಯದು. ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಗಳನ್ನು ತಂದುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯಕರ ಜೀವನ ನಡೆಸಬಹುದು. ಈ ಲೇಖನದಲ್ಲಿ ಅಂತ ಹದೇ ಒಂದು ವಿಚಾರದ ಬಗ್ಗೆ ತಿಳಿಸಿಕೊಡಲಾಗಿದೆ. ಅದೇನೆಂದರೆ ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆ ಹಾಕಿ ಸೇವಿಸುವು ದರಿಂದ ಸಿಗಬಹುದಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ….

ಇದು ತೂಕ ಕಮ್ಮಿ ಮಾಡುತ್ತೆ!

• ಒಣದ್ರಾಕ್ಷಿ ನಿಮಗೆಲ್ಲ ಗೊತ್ತಿರುವ ಹಾಗೆ ನೈಸರ್ಗಿಕವಾದ ಸಕ್ಕರೆ ಅಂಶ ಒಳಗೊಂಡಿರುವ ಹಣ್ಣು ಎಂದು ಹೇಳ ಬಹುದು. ಹಾಗಾಗಿ ನಿಮ್ಮ ದೇಹಕ್ಕೆ ಇದರಿಂದ ಹೆಚ್ಚುವರಿ ಕ್ಯಾಲೋರಿ ಗಳು ಸಿಗುವುದಿಲ್ಲ.

• ಆದರೂ ಸಹ ವೈದ್ಯರು ಹೇಳುವ ಹಾಗೆ ನಿಯಮಿತ ಪ್ರಮಾಣ ದಲ್ಲಿ ಒಣ ದ್ರಾಕ್ಷಿ ಸೇವನೆ ಮಾಡುವುದರಿಂದ ದೇಹದ ತೂಕವನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಜೊತೆಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ.

ಜೀರ್ಣ ಶಕ್ತಿ ಹೆಚ್ಚಿಸುತ್ತದೆ

• ಒಣದ್ರಾಕ್ಷಿ ತನ್ನಲ್ಲಿ ನಾರಿನ ಪ್ರಮಾಣವನ್ನು ಹೆಚ್ಚಾಗಿ ಒಳ ಗೊಂಡಿದ್ದು, ದೀರ್ಘಕಾಲದ ಆರೋಗ್ಯ ಪ್ರಯೋಜನಗಳನ್ನು ಕೊಡುವಲ್ಲಿ ಸದಾ ಮುಂದಿದೆ.

• ಇವುಗಳನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿಯಂತ್ರಣ ವಾಗುತ್ತದೆ ಎಂದು ಹೇಳುತ್ತಾರೆ.

• ಕರುಳಿನ ಭಾಗದ ಚಲನೆ ಉತ್ತಮಗೊಂಡು ಸೇವಿಸಿದ ಯಾವುದೇ ಆಹಾರ ಬಹಳ ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ಸರಾಗವಾಗಿ ಮಲವಿಸರ್ಜನೆ ಆಗುತ್ತದೆ.

ಬಿಪಿ ಕಂಟ್ರೋಲ್ ಮಾಡಿಕೊಳ್ಳಬಹುದು

• ಹೌದು, ನೀರಿನಲ್ಲಿ ನೆನೆ ಹಾಕಿದ ಒಣ ದ್ರಾಕ್ಷಿ ರಕ್ತದ ಒತ್ತಡ ವನ್ನು ಸಹ ನಿಯಂತ್ರಣ ಮಾಡುತ್ತದೆ. ಆಹಾರ ಪದಾರ್ಥ ಗಳಲ್ಲಿ ಉಪ್ಪಿನ ಅಂಶದ ಹೆಚ್ಚು ಬಳಕೆಯಿಂದ ಬಿಪಿ ಹೆಚ್ಚಾಗುತ್ತದೆ.

• ಆದರೆ ಒಣದ್ರಾಕ್ಷಿಯಲ್ಲಿ ಸಿಗುವಂತಹ ಪೊಟ್ಯಾಶಿಯಂ ಪ್ರಮಾಣ ದೇಹದಲ್ಲಿ ಉಪ್ಪಿನ ಪ್ರಮಾಣವನ್ನು ಬ್ಯಾಲೆನ್ಸ್ ಮಾಡುವುದರ ಜೊತೆಗೆ ರಕ್ತದ ಒತ್ತಡವನ್ನು ಸಹ ಅತ್ಯುತ್ತ ಮವಾಗಿ ನಿರ್ವಹಣೆ ಮಾಡಬಲ್ಲದು.

ಮೂಳೆಗಳು ಗಟ್ಟಿಯಾಗುತ್ತವೆ

• ದುರ್ಬಲ ಮೂಳೆ ಹೊಂದಿರುವವರಿಗೆ ಒಣದ್ರಾಕ್ಷಿ ತುಂಬಾ ಒಳ್ಳೆಯದು ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಸಿಗುತ್ತದೆ.

• ನೀರಿನಲ್ಲಿ ನೆನೆ ಹಾಕಿ ಒಣದ್ರಾಕ್ಷಿ ಸೇವನೆ ಮಾಡುವುದರಿಂದ ಕ್ಯಾಲ್ಸಿಯಂ ಜೊತೆಗೆ ಇನ್ನಿತರ ಪೌಷ್ಟಿಕ ಸತ್ವಗಳು ಸಹ ದೇಹಕ್ಕೆ ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.

• ಇದರಿಂದ ಮೂಳೆಗಳ ಸಾಂದ್ರತೆ ಹೆಚ್ಚಾಗುತ್ತದೆ ಮತ್ತು ದಿನ ಕಳೆದಂತೆ ಬರಬಹುದಾದ ಮೂಳೆಗಳ ಸಮಸ್ಯೆ ಬರುವುದಿಲ್ಲ.

ಬಾಯಿಯ ದುರ್ವಾಸನೆ ಮಾಯವಾಗುತ್ತದೆ

• ಹಲವರಿಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ ಬಾಯಿ ತೊಳೆದರೂ ಕೂಡ ಬಾಯಿಯ ದುರ್ವಾಸನೆ ಮಾತ್ರ ದೂರವಾಗುವುದಿಲ್ಲ.

• ಅಂತಹವರು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಒಳ ಗೊಂಡಿರುವ ಒಣ ದ್ರಾಕ್ಷಿಗಳನ್ನು ಆಗಾಗ ಸ್ನಾಕ್ಸ್ ತರಹ ತಿನ್ನುವುದರಿಂದ ತಮ್ಮ ಬಾಯಿಯ ಕೆಟ್ಟ ವಾಸನೆಯಿಂದ ಪಾರಾಗಬಹುದು ಮತ್ತು ಇತರರಿಗೂ ಇದರಿಂದ ಆಗುವ ಕಿರಿಕಿರಿ ತಪ್ಪಿಸಬಹುದು.

ಹಿಂದಿನ ಲೇಖನಪತ್ರಕರ್ತೆ ರಾಣಾ ಪಿಎಂಎಲ್’ಎ ಪ್ರಕರಣ: ಜ. 31ರವರೆಗೆ ವಿಚಾರಣೆ ಮುಂದೂಡುವಂತೆ ಉ. ಪ್ರದೇಶ ನ್ಯಾಯಾಲಯಕ್ಕೆ ಸುಪ್ರೀಂ ಆದೇಶ
ಮುಂದಿನ ಲೇಖನಅಮೃತ ಸರೋವರ ಕೆರೆಯ ಅಂಗಳದಲ್ಲಿ ಹಾರಲಿದೆ ತ್ರಿವರ್ಣ ಧ್ವಜ