ಮನೆ ಅಪರಾಧ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ: ಇಬ್ಬರ ಸಾವು

ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ: ಇಬ್ಬರ ಸಾವು

0

ಕಲಬುರಗಿ(Kalaburgi): ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೇವರ್ಗಿ ಹತ್ತಿರದ ಗೌನಳ್ಳಿ ಕ್ರಾಸ್ ಬಳಿ ನಡೆದಿದೆ.

ತಾಲೂಕಿನ ಹಾಗರಗುಂಡಗಿ ಗ್ರಾಮದ ಸಂಜೀವಕುಮಾರ ವಜಾಪುರ್ (30) ಹಾಗೂ ಟೆಂಪೋ ಟ್ರಾವೆಲರ್ ಚಾಲಕ ಅಪ್ಪರಾಯ ಬಿರಾದಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟಿಟಿ ವಾಹನದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ನಿದ್ರೆ ಮಂಪರಿನಲ್ಲಿದ್ದ ಟಿಟಿ ವಾಹನದ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಟೆಂಪೋ ಟ್ರಾವೆಲರ್ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ವಾಹನದಡಿ ಸಿಲುಕಿದ್ದ ಡ್ರೈವರ್’ನ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ.

ಹಾಗರಗುಂಡಗಿ ಗ್ರಾಮದ ಒಂದೇ ಕುಟುಂಬದವರಾದ ಇವರು, ಕಳೆದ ಒಂದು ವಾರದ ಹಿಂದೆ ಕರ್ನಾಟಕ ಯಾತ್ರೆಗೆ ತೆರಳಿ ವಾಪಸ್​ ಮರಳುತ್ತಿದ್ದರು. ಊರ ಸಮೀಪದಲ್ಲೇ ದುರ್ಘಟನೆ ಸಂಭವಿಸಿದೆ.

ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಕೆಇಎ ಮೂಲಕ ಮೈಸೂರು ವಿವಿ ಕೆ.ಸೆಟ್ ಪರೀಕ್ಷೆಗೆ ಆದೇಶ: ಸಚಿವ ಅಶ್ವಥ್ ನಾರಾಯಣ್’ಗೆ ಪ್ರತಾಪ್ ಸಿಂಹ ಅಭಿನಂದನೆ
ಮುಂದಿನ ಲೇಖನಬಂಧಿತನ ವಕೀಲರು ಹಾಜರಾಗದಿದ್ದಾಗ ನ್ಯಾಯಾಲಯವೇ ವಕೀಲರನ್ನು ನೇಮಿಸಿಕೊಡಬೇಕು: ಹೈಕೋರ್ಟ್