ಮನೆ ರಾಜಕೀಯ ಕನ್ನಡ ಶಾಲೆ ಮುಚ್ಚಲು ಹುನ್ನಾರ ನಡೆಯುತ್ತಿದೆ: ಎಚ್.ವಿಶ್ವನಾಥ್

ಕನ್ನಡ ಶಾಲೆ ಮುಚ್ಚಲು ಹುನ್ನಾರ ನಡೆಯುತ್ತಿದೆ: ಎಚ್.ವಿಶ್ವನಾಥ್

0

ಮೈಸೂರು(Mysuru): ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಕನ್ನಡ ಶಾಲೆ ಮುಚ್ಚಲು ಏನೇನು ಹುನ್ನಾರ ಬೇಕು,  ಅದೆಲ್ಲಾ ನಡೆಯುತ್ತಿದೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ವಿಚಾರ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಅವರು, ಶಾಲಾ ಶಿಕ್ಷಣ ದಿಕ್ಕು ತಪ್ಪುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುವವರು ಆರ್ಥಿಕವಾಗಿ ಹಿಂದುಳಿದವರು. ಸರ್ಕಾರಿ ಶಾಲೆಗೆ ನೂರು ರೂಪಾಯಿ ಶುಲ್ಕ ಯಾಕೆ..? ಎಂದು ಪ್ರಶ್ನಿಸಿದರು.

ಹಿಂದೆ ಸರ್ಕಾರದಿಂದಲೇ ಶಾಲಾ ನಿರ್ವಹಣೆಗೆ ವರ್ಷಕ್ಕಿಷ್ಟು ಎಂದು ಅನುದಾನ ನೀಡಲಾಗಿತ್ತು. ಈಗ ಅದೆಲ್ಲವನ್ನು ನಿಲ್ಲಿಸಿದ್ದಾರೆ. ಈಗ ನಿರ್ವಹಣಾ ವೆಚ್ಚವಾಗಿ ಪೋಷಕರಿಂದ ನೂರು ರೂಪಾಯಿ ಪಡೆಯುವುದು ಸರಿಯಲ್ಲ ಎಂದರು.

ದಲಿತರ ಮನೆ ಊಟ: ಅಸ್ಪೃಶ್ಯತೆ ಜಾರಿಯಲ್ಲಿದೆ ಎಂದು ಬಯಲು ಮಾಡಿದ ಬಿಜೆಪಿ ನಾಯಕರು

ದಲಿತರ ಮನೆ ಊಟಕ್ಕೆ ಮನೆಗೆ ಹೋಗಿ ಅಸ್ಪೃಶ್ಯತೆ ಇನ್ನೂ ಜಾರಿಯಲ್ಲಿದೆ ಎಂದು ಬಿಜೆಪಿ ನಾಯಕರು  ಬಯಲು ಮಾಡಿದರು. ಸ್ವಾತಂತ್ರ್ಯ ನಂತರದ 75 ವರ್ಷದ ಇತಿಹಾಸದಲ್ಲಿ ಈ ರೀತಿಯಾದ ಬೆಳವಣಿಗೆ ನಡೆದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತರ ಮನೆಯಲ್ಲಿ  ಬಿ.ಜೆ.ಪಿ ನಾಯಕರ ಊಟದ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಮನೆಗೆ‌ ಹೋಗಿ ಹೊಟೇಲ್ ಊಟ ತರಿಸಿ ಹೊಸ ತಟ್ಟೆ ಲೋಟ ತರಿಸಿ ಊಟ ಮಾಡೋದಾ..? ದಲಿತರ ಮನೆಯಲ್ಲಿ ತ್ರಿ’ರೋಜಸ್, ಕಣ್ಣಂದ್ದೇವನ್, ಟೀ ನೇ ಕುಡಿಬೇಕಾ..? ನೀವು ಬ್ರಾಂಡ್‌ ಹೋಟೆಲ್ ಊಟತಿಂಡಿ ತಿನ್ನೋಕೆ ದಲಿತರ ಮನೆ ಹೋಗಬೇಕಾ..? ಬ್ರಾಹ್ಮಣರು, ಲಿಂಗಾಯತರ ಹೋಟೆಲ್ ಊಟ ತರಿಸಿ ತಿನ್ನೋಕೆ ದಲಿತರ ಮನೆಗೆ ಯಾಕ್ ಹೋಗ್ತಿರಾ..? ಎಂದು ಪ್ರಶ್ನಿಸಿದರು.

ನೀವು ಮಾಡಬೇಕಾದ ಕೆಲಸ ಮಾಡಿ. ಅದು ಬಿಟ್ಟು ನೀವು ನಿಮ್ಮ ರಾಜಕೀಯ ಲಾಭಕ್ಕಾಗಿ ಬರಬೇಡಿ. ದಲಿತರ ಮನೆಗೆ ನೀವು ಬಂದ್ರೆ ನಿಮಗೆ ಲಾಭ. ನಮಗೇನು ಲಾಭ…? ದಯಮಾಡಿ ಬರಬೇಡಿ, ಬಂದು ನಮಗೆ ಅವಮಾನ ಮಾಡಬೇಡಿ.

ಇದೆಲ್ಲಾ ಕರ್ನಾಟಕ ಸರ್ಕಾರಕ್ಕೆ ಒಳ್ಳೆಯ ಲಕ್ಷಣ ಅಲ್ಲ..! ಇವರೆಲ್ಲಾ ಅಂಬೇಡ್ಕರ್’ಗೆ,  ಸಂವಿಧಾನಕ್ಕೆ ಮತ್ತು ನಮ್ಮ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾವಣೆ ವಿಚಾರ ಕುರಿತಂತೆ ಮಾತನಾಡಿ, ಪ್ರತಾಪ್ ಸಿಂಹ ಮೈಸೂರು ಮಹಾರಾಜರಿಗಿಂತ ದೊಡ್ಡವರು. ಅವರಿಗಿಂತ ನಾನೇ ಜಾಸ್ತಿ ಕೆಲಸ ಮಾಡಿದ್ದೇನೆ ಅಂತಾ ಹೇಳಿದ್ದಾರೆ. ಅವರ ಬಗ್ಗೆ ನಾನೇನು ಮಾತಡಲಿ ? ಅವರು ದೊಡ್ಡ ವ್ಯಕ್ತಿ ಎಂದು ವ್ಯಂಗ್ಯವಾಡಿದರು.

ಹಿಂದಿನ ಲೇಖನಜಿಟಿಡಿ ಅವರನ್ನು ಬಿಜೆಪಿಗೆ ಬರುವಂತೆ ಕರೆದಿರಲಿಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಮುಂದಿನ ಲೇಖನಸರ್ಕಾರಿ ಶಾಲೆಗಳಲ್ಲಿ ದೇಣಿಗೆ ಸಂಗ್ರಹ:  ನನ್ನದಾಗಲಿ, ಮುಖ್ಯಮಂತ್ರಿಯದ್ದಾಗಲಿ ಪಾತ್ರವಿಲ್ಲ ಎಂದ ಬಿ.ಸಿ.ನಾಗೇಶ್