ಮನೆ ಅಪರಾಧ ಪತಿಯ ಕಿರುಕುಳಕ್ಕೆ ಬೇಸತ್ತು ಫೇಸ್ ಬುಕ್ ಲೈವ್ ನಲ್ಲಿ ಮಹಿಳೆ ಆತ್ಮಹತ್ಯೆ

ಪತಿಯ ಕಿರುಕುಳಕ್ಕೆ ಬೇಸತ್ತು ಫೇಸ್ ಬುಕ್ ಲೈವ್ ನಲ್ಲಿ ಮಹಿಳೆ ಆತ್ಮಹತ್ಯೆ

0

ಹೈದರಾಬಾದ್: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಫೇಸ್‌ ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Join Our Whatsapp Group

ಹೈದರಾಬಾದ್ ಮೂಲದ ಸನಾ( 32) ಮೃತ ಮಹಿಳೆ.

ಕಳೆದ 5 ವರ್ಷಗಳ ಹಿಂದೆ ಸನಾ ತನ್ನ ಶಾಲಾ ಸಹಪಾಠಿಯಾಗಿದ್ದ ಹೇಮಂತ್‌ ಎನ್ನುವವರನ್ನು ವಿವಾಹವಾಗಿದ್ದರು. ಆ ಸಮಯದಲ್ಲಿ ಹೇಮಂತ್ ನಿರುದ್ಯೋಗಿಯಾಗಿದ್ದರು. ಸನಾ ಆಗ ದೆಹಲಿಯ ಏರ್‌ ಲೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಹೇಮಂತ್‌ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದರು. ಇದೇ ಕಾರಣದಿಂದ ಬೇಸತ್ತು ಹೋಗಿದ್ದ ಸನಾ ಫೇಸ್‌ ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ಗಂಡನ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಹೇಮಂತ್‌ ಡಿಜೆ ಆಗಿ ಕೆಲಸ ಮಾಡುತ್ತಿದ್ದು, ಈ ವೇಳೆ ಡಿಜೆಯಾಗಿರುವ ಯುವತಿಯೊಂದಿಗೆ ಹೇಮಂತ್‌ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಹೇಮಂತ್‌ ಸನಾ ಅವರಿಗೆ ಕಿರುಕುಳ ನೀಡುತ್ತಿದ್ದರು. ಅವರ ಅಕ್ರಮ ಸಂಬಂಧವೇ ಈ ಘಟನೆಗೆ ಕಾರಣವೆಂದು ಮೃತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.

ಸದ್ಯ ಹೇಮಂತ್ ಹಾಗೂ ಆತನ ಪೋಷಕರ ವಿರುದ್ಧ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಾಚಾರಂ ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ, ನಗದು ದೋಚಿ ಪರಾರಿ
ಮುಂದಿನ ಲೇಖನ‘ಗೃಹ ಜ್ಯೋತಿ’ ಯೋಜನೆ ನೋಂದಣಿಗೆ 20 ರೂ.ಗಿಂತ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕಠಿಣ ಕ್ರಮ