ಮನೆ ಅಪರಾಧ ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

ನಿಂತಿದ್ದ ಲಾರಿಗೆ ಟಿಟಿ ಢಿಕ್ಕಿ: ಓರ್ವ ಸಾವು, ಹಲವರಿಗೆ ಗಾಯ

0

ಕಡೂರು: ರಾಷ್ಟ್ರೀಯ ಹೆದ್ದಾರಿಯ ಯುನಿವರ್ಸಿಟಿ ಸಮೀಪದ ಬ್ರಿಡ್ಜ್ ಬಳಿ ಬುಧವಾರ ಬೆಳಗ್ಗೆ ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ.

Join Our Whatsapp Group

ಮೃತ ದುರ್ದೈವಿ ಮಂಜುನಾಥ(40) ಎನ್ನುವವರಾಗಿದ್ದು, ಹಾಸನ ತಾಲೂಕಿನ ವಂಗೆರೆ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. 3 ಮಂದಿಗೆ ಗಂಭೀರ ಗಾಯಗಳಾಗಿದ್ದು ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಟಿಯಲ್ಲಿದ್ದ ರಂಗಪ್ಪ, ಅಶ್ವಿನಿ, ಲಕ್ಷ್ಮಿ, ಭೂಮಿಕ, ನಾಗರಾಜು, ರುಕ್ಮಿಣಿ, ಪ್ರೀತಮ್, ಸಾಗರ್, ದೊರೆಸ್ವಾಮಿ, ಸಂಜಯ್ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಟಿ ಚಾಲಕ ಮಣಿ ಕುಮಾರ್ ಅವರಿಗೂ ಪೆಟ್ಟಾಗಿದ್ದು ಕಡೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

ಹಿಂದಿನ ಲೇಖನಬಸ್ – ಬೈಕ್ ಅಪಘಾತ: ಸವಾರ ಸ್ಥಳದಲ್ಲೇ ಸಾವು
ಮುಂದಿನ ಲೇಖನನಾನು ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ: ಪ್ರಧಾನಿ ಮೋದಿ