ಮನೆ ರಾಜ್ಯ ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ: ವಿಶೇಷ ಪೂಜೆ ಸಲ್ಲಿಕೆ

ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ: ವಿಶೇಷ ಪೂಜೆ ಸಲ್ಲಿಕೆ

0

ಮೈಸೂರು:  ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಅಬ್ಬರ ಪ್ರಚಾರದ ಭರಾಟೆ ಜೋರಾಗಿದೆ.

Join Our Whatsapp Group

ಈ ನಡುವೆ ಪ್ರಚಾರಕ್ಕೆ ತೆರಳುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ  ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು. ಅಮಿತ್ ಶಾರಿಗೆ ಶಾಸಕ ಎಸ್.ಎ ರಾಮದಾಸ್ ಸೇರಿ ಹಲವು ಮುಖಂಡರು ಸಾಥ್ ನೀಡಿದರು.

ಇಂದು ಅಮಿತ್ ಶಾ ಅವರು ಚಾಮರಾಜನಗರ ಹಾಸನ ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ  ರೋಡ್ ಶೋ, ಪ್ರಚಾರ ನಡೆಸಲಿದ್ದಾರೆ.

ಹಿಂದಿನ ಲೇಖನಸ್ನೇಹಿತನ ತಾಯಿ ಅಂತ್ಯಸಂಸ್ಕಾರ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವು
ಮುಂದಿನ ಲೇಖನಸಲಿಂಗ ವಿವಾಹ: ಶಾಸಕಾಂಗದ ಪರಿಗಣನೆಗೆ ಬಿಡುವಂತೆ ಸುಪ್ರೀಂ ಕೋರ್ಟ್’ಗೆ ಬಿಸಿಐ ಮನವಿ