ಮನೆ ರಾಜಕೀಯ ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

ಗೋರಖ್‌ಪುರ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ

0

ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರದ ಬಗ್ಗೆ ಅನೇಕ ಚರ್ಚೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಅಧಿಕೃತವಾಗಿ ಬಿಜೆಪಿ  ಪ್ರಕಟಣೆ ಹೊರಡಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು  ತಿಳಿದುಬಂದಿದೆ

ಈ ಬಗ್ಗೆ ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್ಟರ್ ನಲ್ಲಿ ಮಾಹಿತಿ ಪ್ರಕಟಿಸಿದ್ದು, ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಧರ್ಮೇಂದ್ರ ಪ್ರಧಾನ್ ಅವರು ಮೊದಲ ಹಂತದ 57 ಹಾಗೂ ಎರಡನೇ ಹಂತದ 38 ಸೀಟುಗಳಲ್ಲಿ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

2017ರ ವರೆಗೆ ಸತತ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಪ್ರಬಲ ಕ್ಷೇತ್ರದಿಂದಲೇ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಲು ಪಕ್ಷವು ನಿರ್ಧರಿಸಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.ಫೆಬ್ರುವರಿ 10ರಂದು ಮೊದಲನೇ ಹಂತ, ಫೆ.14ರಂದು ಎರಡನೇ, ಫೆ.20ರಂದು ಮೂರನೇ, ಫೆ. 23ರಂದು ನಾಲ್ಕನೇ, ಫೆ.27ರಂದು ಐದನೇ, ಮಾರ್ಚ್ 03ರಂದು ಆರನೇ ಮತ್ತು ಮಾ. 07ರಂದು ಏಳನೇ ಹಂತದ ಮತದಾನವು ನಡೆಯಲಿದೆ. ನಂತರ ಮಾರ್ಚ್ 10ರಂದು ಮತ ಎಣಿಕೆ ಜರುಗಲಿದೆ.

ಹಿಂದಿನ ಲೇಖನಭಾರತದಿಂದ ಕಾಣೆಯಾಗಿದ್ದ ವಿಗ್ರಹ ಇಂಗ್ಲೆಂಡ್ ನಲ್ಲಿ ಪತ್ತೆ: ಭಾರತಕ್ಕೆ ಹಸ್ತಾಂತರ
ಮುಂದಿನ ಲೇಖನಮೈಸೂರಿನ ಹೆಸರಾಂತ ಸುತ್ತೂರು ಜಾತ್ರಾ ಮಹೋತ್ಸವ ರದ್ದು