ಮನೆ ಯೋಗಾಸನ ವ್ಯಾಘ್ರಾಸನದ ಉಪಯೋಗ

ವ್ಯಾಘ್ರಾಸನದ ಉಪಯೋಗ

0

ಅರ್ಥ:- ಈ ಆಸನ ಕೂಡ ಹುಲಿಯ ಹೆಸರಿಗೆ ಮೀಸಲು.

Join Our Whatsapp Group

ವಿವರಣೆ:- ವ್ಯಾಘ್ರಾಸನ-1ರ ಸ್ಥಿತಿಗೆ ಹೋಗುವ ಮೊದಲು ಸೊಂಟವನ್ನು ಮೇಲೆತ್ತಿ ಎರಡು ಮಂಡಿ ಮತ್ತು ಎರಡು ಹಸ್ತಗಳನ್ನು ನೆಲಕ್ಕೆ ಒತ್ತಿ ನಿಲ್ಲುವ ಭಂಗಿಗೆ ಬರಬೇಕು. ನಂತರ ಬಲ ಮಂಡಿಯನ್ನು ಮಡಿಸಿ ಬಲಗಾಲನ್ನು ಎರಡೂ ಕೈಗಳ ಮಧ್ಯದಲ್ಲಿ ಮುಂದೆ ತೆಗೆದುಕೊಳ್ಳಬೇಕು. ಮುಂದೆ ಇರುವ ಬಲ ಮಂಡಿಗೆ ಮೂಗನ್ನು ತಾಗಿಸಬೇಕು. ಬೆನ್ನನ್ನು ಹೊಟ್ಟೆಯನ್ನು ಒಳಗೆಳೆದು ಬೆನ್ನನ್ನು ಮೇಲಕ್ಕೆ ಎತ್ತಿರಬೇಕು. ಕೈಗಳು ಭುಜದ ನೇರದಲ್ಲಿ ನೇರವಾಗಿರಬೇಕು. ಸ್ಥಿತಿಯಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಇದೇ ರೀತಿ ಮತ್ತೊಂದು ಕಡೆ ಮುಂದುವರಿಸುವುದು.

ಉಪಯೋಗ:- ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್, ಮಲಬದ್ಧತೆ, ಹೊಟ್ಟೆಯ ಭಾಗದ ಕೊಬ್ಬಿನಂಶ ಕರಗಿಸಲು ಉತ್ತಮ ಆಸನ. ಬೆನ್ನು ನೋವು ಮತ್ತು ಅಸ್ತಮಾ ಸಮಸ್ಯೆ ನಿವಾರಣೆಯಾಗುವುದು.

ಹಿಂದಿನ ಲೇಖನಮೊದಲೊಂದಿಪೇ ನಿನಗೆ ಗಣನಾಥ
ಮುಂದಿನ ಲೇಖನಅಕ್ಷಯ ತೃತೀಯದಂದೇ ಪಂಚಗ್ರಾಹಿ ಯೋಗ: ಈ 5 ರಾಶಿಯವರಿಗೆ ಧನಲಾಭ..!