ಶುಕ್ರನ ರಾಶಿ ಮತ್ತು ಬೃಹಸ್ಪತಿಯ ನಕ್ಷತ್ರ ಭಾಗದಲ್ಲಿ ಜನಿಸಿದ ಅಧಿಕಾಂಶ ಜಾತಕರು ವಿದೇಶ ಯಾತ್ರೆ ಮಾಡುವವರು.ಚಿತ್ರಕಾರ,ಸತ್ಯದ ಆಕಾಂಕ್ಷಿ ಯುದ್ಧದಲ್ಲಿ ಕುಶಲ, ಮಧ್ಯಸ್ಥಿಕೆಯ ಕಾರ್ಯಗಳಲ್ಲಿ ನಿಪುಣ ವ್ಯಾಪಾರಾದಿಗಳಲ್ಲಿ ಅಭಿರುಚಿಯಿರುವವರು, ವ್ಯಾಪಾರಿ ಸಂಸ್ಥೆಗಳಿಗೆ ಸಂಬಂಧಿಸಿದವರು, ಖಜಾಂಚಿ,ಲೆಕ್ಕತಪಾಸಕ ಹಾಗೂ ಭಾಷಣ ಕಲೆಯಲ್ಲಿ ನಿಪುಣರಾಗಿರುತ್ತಾರೆ. ಚಾರಿತ್ಯದ ವಿಷಯದಲ್ಲಿ ಇವರಲ್ಲಿ ಮಿಶ್ರಿತ ಗುಣಗಳು ವಿದ್ಯಮಾನವಾಗಿರುತ್ತವೆ. ಆದರೆ, ಮಹತ್ವಾಕಾಂಕ್ಷಿ ವಿಚಾರದವರು, ಮನೋರಂಜನೆಯಲ್ಲಿ ಅಭಿರುಚಿ ಯುಳ್ಳವರು, ಸೌಂದರ್ಯ ಮತ್ತು ರತಿಪ್ರಿಯರು,ವಿರುದ್ಧಲಿಂಗದತ್ತ ಸದಾ ಆಕರ್ಷಣೆ ಮತ್ತು ಲಾಲ ಸೆಯುಳ್ಳವರಾಗಿರುತ್ತಾರೆ. ಜ್ಯೋತಿಷ್ಯಾದಿಗಳಲ್ಲಿ ವಿಶ್ವಾಸವಿರುವ ಇಂಥ ಜಾತಕರು ಸುಖ ಮತ್ತು ಭೋಗದ ಜೀವನ ನಡೆಸುತ್ತಾರೆ.
ಸೂರ್ಯನು ಈ ನಕ್ಷತ್ರದ ಭಾಗದ ಮೇಲೆ ಕಾರ್ತಿಕ ಮಾಸದ ಅಂತಿಮ 10 ದಿನಗಳ ಮಧ್ಯೆ ಇರುತ್ತಾನೆ. ಚಂದ್ರನು ಪ್ರತಿ 27ನೆಯ ದಿನ ಸುಮಾರು 18 ಗಂಟೆಗಳ ಅವಧಿಯವರೆಗೆ ಈ ನಕ್ಷತ್ರ ಭಾಗದ ಮೇಲೆ ಸ್ಥಿತನಿರುತ್ತಾನೆ. ಈ ಗ್ರಹಗಳು ಈ ರಾಶಿಯ ಮೇಲೆ ಭ್ರಮಣ ಮಾಡಿದಾಗ ಅಥವಾ ಶುಕ್ರ ಮತ್ತು ಬೃಹಸ್ಪತಿ ಗೋಚರವಶ ಭ್ರಮಣ ಮಾಡಿದಾಗ, ಮೂಲ ಜನ್ಮ ಕುಂಡಲಿಯಲ್ಲಿ ಇವರು ಕಾರಕರಾಗಿರುವ ವಿಷಯಗಳಲ್ಲಿ ಜಾತಕನಿಗೆ ಫಲವನ್ನು ಪ್ರಧಾನಿಸುತ್ತಾರೆ.
ಚರಣದ ಸ್ವಾಮಿ ಫಲ :
ಪ್ರಥಮ ಚರಣದ ಸ್ವಾಮಿ ಗುರು ಮಂಗಳ ಜಾತಕನನ್ನು ಅತ್ಯಂತ ಮಹತ್ವಾಕಾಂಕ್ಷಿಯನ್ನಾಗಿ ಮಾಡುವರು.
ದ್ವಿತೀಯ ಚರಣದ ಸ್ವಾಮಿ ಗುರು ಶುಕ್ರ ಜಾತಕನನ್ನು ಕವಿ ಅಥವಾ ಸಾಹಿತ್ಯಗಾರನನ್ನಾಗಿ ಮಾಡುವರು.
ತೃತೀಯ ಚರಣದ ಸ್ವಾಮಿ ಗುರು ಬುಧ ಮತ್ತು ಮಾನಸಿಕತೆಯಲ್ಲಿ ವೃದ್ಧಿ ಮಾಡಿ,ಸಾಹಿತ್ಯದಲ್ಲಿ ಅಭಿರುಚಿಯ ವೃದ್ಧಿ ಮಾಡುವವರು.
ಚತುರ್ಥ ಚರಣದ ಸ್ವಾಮಿ ಗುರು ಚಂದ್ರ ಜಾತಕನ ಉಗ್ರತೆಯನ್ನು ಕಡಿಮೆ ಮಾಡುವರು.
ವಿಶಾಖಾ ನಕ್ಷತ್ರ ಚತುರ್ಥ ಚರಣ :
ವಿಶಾಖಾ ನಕ್ಷತ್ರ ಚತುರ್ಥ ಚರಣದ ಕ್ಷೇತ್ರ ವ್ಯಾಪ್ತಿ ಶೂನ್ಯ ಅಂಶ ವೃಶ್ಚಿಕ ರಾಶಿ ಐದು ಅಂಶ 20 ಕಲರು ವೃಶ್ಚಿಕ ರಾಶಿಯವರಿಗೆ, ರಾಶಿ ಸ್ವಾಮಿ ಮಂಗಳ,,ನಾಮಾಕ್ಷರ ತೋ. ವಿಶಾಖಿ ನಕ್ಷತ್ರದ ಚತುರ್ಥ ಚರಣ ಪ್ರತಿನಿಧಿಸುವ ಜಾತಕಾನ ಶರೀರ ಭಾಗ ಮೂತ್ರಾಶಯ ಕಿಬ್ಬೊಟ್ಟೆ ಮೂತ್ರಮಾರ್ಗ, ಜನನೇಂದ್ರಿಯ ಮಾಲಾಶಯ ಅಂಗ, ಕೆಳಗಿನ ಕರುಳು, ಶುಕ್ರ ಗ್ರಂಥಿ. ಇನ್ನುಳಿದ ಅಂಶಗಳ ನಕ್ಷತ್ರದ ಒಂದು ಎರಡು ಮೂರನೆ ಚರಣದಂತೆಯೇ.
ವಿಶಾಖ ನಕ್ಷತ್ರದ ಜಾತಕಾನ ಸ್ವರೂಪ :
ಅತ್ಯಂತ ಪ್ರಾಚೀನ ವಿಷಯಗಳಲ್ಲಿ ಆಸಕ್ತ ಗೌರವಶಾಲಿ, ಉತ್ಸಾಹಿ, ಪ್ರಭಾವಶಾಲಿ, ಭದ್ರ, ಪ್ರಾಮಾಣಿಕ, ಸ್ಪಷ್ಟವಾಗಿ ಮತ್ತು ಸರಳವಾಗಿ ಜೀವಿಸುವವ ಉನ್ಮುಕ್ತ ವಿಚಾರಧಾರೆಯವ, ಅನಿಯಂತ್ರಿತ ಇಚ್ಛೆಗಳುಳ್ಳವ, ಸ್ವತಂತ್ರಾಪೂರ್ವ,ಉದಾರ,ದಯಾಳು ಅತಿ ವಾದಿ ಅಸಂಯಮಿ ಉಚ್ಛೃಂಖಲ, ಅನ್ಯರನ್ನು ಅರಿತುಕೊಳ್ಳುವುದರಲ್ಲಿ ಕುಶಲ, ಪ್ರಭಾವಶಾಲಿ ಮಾತುಗಾರ ಶೂರ ಮತ್ತು ಕೂಟನೀತಿಜ್ಞ.
ವಿಶಾಖ ಜಾತಕನ ರೋಗ :
ಗರ್ಭಾಶಯ ಹಾಗು ಜನೆಂದ್ರಿಯ ಸಂಬಂಧಿ ರೋಗ, ಆಕೃತಿ ದೋಷ ವಿಕೀರ್ಣತಾ, ಸ್ರಾವ ಗ್ರಂಥಿಗಳಲ್ಲಿ ವೃದ್ಧಿ, ಮೂತ್ರಸಂಬಂಧಿ ರೋಗ, ಅಸಾಧಾರಣ ರಕ್ತಸ್ರಾವ ಹರ್ನಿಯಾ ಕರುಳು ವೃದ್ದಿ, ಮೂತ್ರಪಿಂಡಗಳಲ್ಲಿ ಕಲ್ಲು, ದ್ವಂದ್ವ ಮನಸ್ಥಿತಿ ಗಾಬರಿ, ಮೂತ್ರಾಶಯದಲ್ಲಿ ಗಡ್ಡೆ ಮೂತ್ರ ಮಾರ್ಗದಲ್ಲಿತಡೆ ಜಲೋದರ ರಕ್ತಘಾತ, ಮೂಗಿನಲ್ಲಿ ರಕ್ತಸ್ರಾವ.
ವಿಶಾಖ ಜಾತಕಾನ ಉದ್ಯೋಗ :
ಬ್ಯಾಂಕ್, ನ್ಯಾಯವಾದಿ, ಜೀವವಿಮಾ ಸಂಸ್ಥೆ ರಾಸಾಯನಿಕ ಔಷಧಿಗಳು, ಹೊಟ್ಟು ಆಸ್ತಿಯ ಯಜಮಾನ, ಕೃಷಿಕ, ಶೇರುಗಳ ವ್ಯಾಪಾರಿ, ಕುದುರೆ ರೇಸ್, ಬ್ಯಾಟರಿ, ಕಸ್ಟಮ್ಸ್ ಉದ್ಯಮಕ್ಷೇತ್ರ, ರಕ್ಷಣಾ ಮಂತ್ರಿ, ಗ್ರಾಮ ನ್ಯಾಯಾಧೀಶ, ಆಯುರ್ವೇದ ಕಚ್ಚಾ ಎಣ್ಣೆ, ಚಿಕಿತ್ಸಾ ಶಾಸ್ತ್ರ ಪುಸ್ತಕ ಪ್ರಕಾಶಕ, ವೈದ್ಯ, ಶಸ್ತ್ರ ಚಿಕಿತ್ಸಕ ಅಥವಾ ಸಲಹೆಗಾರ.