ಮನೆ ಸುದ್ದಿ ಜಾಲ ಯೋಗೇಶ್ ಗೌಡ ಹತ್ಯೆ ಪ್ರಕರಣ ಇಂದು ತೀರ್ಪು – ಆರೋಪಿಗಳ ಎದೆಯಲ್ಲಿ ಢವಢವ..!

ಯೋಗೇಶ್ ಗೌಡ ಹತ್ಯೆ ಪ್ರಕರಣ ಇಂದು ತೀರ್ಪು – ಆರೋಪಿಗಳ ಎದೆಯಲ್ಲಿ ಢವಢವ..!

0

ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ನ್ಯಾಯಾಲಯ ಇಂದು (ಏ.15) ಮಧ್ಯಾಹ್ನ 3ಕ್ಕೆ ಮೂಂದೂಡಿದೆ.

ಈ ಪ್ರಕರಣದ ಎಲ್ಲಾ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದಾರೆ. ನ್ಯಾಯಾಧಿಶರು ಅವರ ಹಾಜರಿಯನ್ನು ದಾಖಲಿಸಿದರು. ಬಳಿಕ ಆದೇಶ ಮುಂದೂಡಿಕೆ ಮಾಡಿದರು. ಬಹುತೇಕ ಮಧ್ಯಾಹ್ನದ ಬಳಿಕ ಆದೇಶ ಪ್ರಕಟವಾಗಲಿದೆ. ಮದ್ಯಾಹ್ನ ಮೂರು ಗಂಟೆ ವೇಳೆಗೆ ತೀರ್ಪು ಪ್ರಕಟಗೊಳ್ಳುವ ಬಗ್ಗೆ ನ್ಯಾಯಾಧೀಶರು ಸುಳಿವು ನೀಡಿದರು.

ಸತತ 10 ವರ್ಷಗಳ ವಿಚಾರಣೆ ಬಳಿಕ ಕೊಲೆ ಕೇಸ್‌ನ ತೀರ್ಪು ಇಂದು ಪ್ರಕಟವಾಗಲಿದೆ. ಹೀಗಾಗಿ, ಕುಲಕರ್ಣಿಗೆ ಶಿಕ್ಷೆಯೋ? ಖುಲಾಸೆಯೋ? ಎಂಬ ಆತಂಕ ಹೆಚ್ಚಾಗಿದೆ. ಧಾರವಾಡದಲ್ಲಿ 2016 ಜೂನ್‌ನಲ್ಲಿ ಯೋಗಿಶ್ ಗೌಡ ಕೊಲೆಯಾಗಿತ್ತು. ಶಾಸಕ ವಿನಯ್ ಕುಲಕರ್ಣಿ ಮೇಲೆ ಕೊಲೆಗೆ ಒಳಸಂಚು ಆರೋಪ ಕೇಳಿಬಂದಿತ್ತು.

ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐ ಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ತನಿಖೆ ನಡಸಿದ್ದ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು.

ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ 21 ಜನ ಆರೋಪಿಗಳಿದ್ದಾರೆ. ಆರೋಪಿಗಳ ವಕೀಲರು ಮತ್ತು ಸರ್ಕಾರಿ ವಕೀಲರು ಸಲ್ಲಿಸಿದ್ದ ಲಿಖಿತ ರೂಪದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಕಾರಣ ಏಪ್ರಿಲ್ 9ರಂದು ಕೋರ್ಟ್ ಆದೇಶವನ್ನು ಇಂದಿಗೆ (ಏ.15) ಮುಂದೂಡಿತ್ತು.