ಮನೆ ಅಡುಗೆ ಸುಲಭವಾಗಿ ಮಾಡಿ ಮ್ಯಾಂಗೋ ಐಸ್ ಕ್ರೀಂ..

ಸುಲಭವಾಗಿ ಮಾಡಿ ಮ್ಯಾಂಗೋ ಐಸ್ ಕ್ರೀಂ..

0

ಐಸ್ ಕ್ರಿಂ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಸೀಸನ್ ನಲ್ಲಿ ಬರುವ ಮ್ಯಾಂಗೋ ಐಸ್ ಕ್ರೀಂ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಹೀಗಾಗಿ ಮ್ಯಾಂಗೋ ಐಸ್ ಕ್ರೀಂ ಮಾಡುವ ಸರಳ ಹಾಗೂ ಸುಲಭ ವಿಧಾನ..,

ಬೇಕಾಗುವ ಸಾಮಾಗ್ರಿಗಳು – ಮಾವಿನ ಹಣ್ಣು, ಸಕ್ಕರೆ – ಚಮಚ, ಫ್ರೆಶ್ ಕ್ರೀಮ್

ಮಾಡುವ ವಿಧಾನ :-

  • ಒಂದು ಮಿಕ್ಸರ್ ಜಾರ್ ಗೆ ಸಿಪ್ಪೆ ತೆಗೆದ ಮಾವಿನಹಣ್ಣಿನ ಪಲ್ಫ್ ಹಾಗೂ ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
  • ಈಗ ಒಂದು ಮಿಕ್ಸಿಂಗ್ ಬೌಲ್ ಗೆ ಫ್ರಿಜ್ಡ್ ನಲ್ಲಿಟ್ಟಿದ್ದ ಫ್ರೆಶ್ ಕ್ರೀಮ್ ಅನ್ನು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ.
  • ಬ್ಲೆಂಡ್ ಮಾಡಿದ ಫ್ರೆಶ್ ಕ್ರೀಮ್ ಗೆ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ.
  • ಈಗ ಒಂದು ಫ್ರೀಜರ್ ಬೌಲ್ ಗೆ ಮಿಶ್ರಣವನ್ನು ಹಾಕಿ 6-7 ಗಂಟೆ ಕಾಲ ಫ್ರೀಜ್ ಮಾಡಿ.
  • ಬಳಿಕ ಸರ್ವ್ ಮಾಡಿ. ಎಂಜಾಯ್ ಮಾಡಿ
  • ಜೊತೆಗೆ ಐಸ್ ಕ್ರೀಂ ಗೆ ಟುಟಿ, ಫ್ರೂಟಿ, ಸಣ್ಣಗೆ ಕಟ್ ಮಾಡಿದ ಡ್ರೈ ಫ್ರೂಟ್ಸ್, ಕ್ಯಾರಮಲ್ ಪೀಸಸ್ ಸೇರಿಸಬಹುದು.