ಮನೆ ರಾಜಕೀಯ ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಬಿಜೆಪಿ ಪಕ್ಷಗಳೇ ಕಾರಣ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಬಿಜೆಪಿ ಪಕ್ಷಗಳೇ ಕಾರಣ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

0

ಬೆಂಗಳೂರು:  ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಗುಡುಗಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಹಿಜಾಬ್ ವಿವಾದಕ್ಕೆ ಈ ಎರಡು ಪಕ್ಷಗಳೇ ಕಾರಣ ಪ್ರಕರಣ  ವಿಸ್ತೃತ ಪೀಠಕ್ಕೆ ಹೋಗಿದೆ ಅಂದ್ರೆ ಗಂಭೀರವಾಗಿ ಪರಿಗಣಿಸಿದೆ.  ಸರ್ಕಾರ ಈ ವಿವಾದ ಹತ್ತಿಕ್ಕಬಹುದಿತ್ತು ಆದರೆ ಮಾಡಿಲ್ಲ. ಸರ್ಕಾರಕ್ಕೆ  ಮೊದಲೇ ಮಾಹಿತಿ ತಿಳಿದಿರುತ್ತದೆ. ಆದೆರೆ ಯಾಕೆ ಹೀಗಾಯಿತು. ವಿವಾದ ನಡೆಯಲಿ ಎಂದು ಬಿಜೆಪಿ ಸರ್ಕಾರ ಬಿಟ್ಟಿದೆ.  ಬಿಜೆಪಿ ಸರ್ಕಾರವೇ ಈ ವಿವಾದ ಹಬ್ಬಲು ಬಿಟ್ಟಿದೆ.  ಎಲ್ಲಗೆ ಬಂದಿದೆ ನಮ್ಮ ರಾಜ್ಯ. ಎರಡೂ ಪಕ್ಷದ ನಾಯಕರು ಜನರನ್ನ ಪ್ರಚೋದಿಸುತ್ತಿದ್ದಾರೆ ಎಂದು ಹೆಚ್.ಡಿ ದೇವೇಗೌಡರು ಕಿಡಿಕಾರಿದರು.

ಹಿಂದಿನ ಲೇಖನಸತ್ಯಮಂಗಲ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ರದ್ದುಪಡಿಸಿ ಹೈಕೋರ್ಟ್ ಆದೇಶ
ಮುಂದಿನ ಲೇಖನಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದ ಮತದಾನ ಆರಂಭ