ಮನೆ ಕಾನೂನು ವಿಧ್ವಂಸಕ ಕೃತ್ಯಕ್ಕೆ ಸಂಚು: ಎಲ್‌ಇಟಿ ಉಗ್ರ ಸಲ್ಮಾನ್‌ ಎನ್‌ಐಎ ವಶಕ್ಕೆ

ವಿಧ್ವಂಸಕ ಕೃತ್ಯಕ್ಕೆ ಸಂಚು: ಎಲ್‌ಇಟಿ ಉಗ್ರ ಸಲ್ಮಾನ್‌ ಎನ್‌ಐಎ ವಶಕ್ಕೆ

0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಬೆಂಗಳೂರು ಸೇರಿ ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಲು ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ರವಾಂಡ ದೇಶ ದಲ್ಲಿ ಬಂಧನಕ್ಕೊಳಗಾದ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಸಂಚುಕೋರ ಸಲ್ಮಾನ್‌ ಖಾನ್‌ ಅಲಿಯಾಸ್‌ ಸಲ್ಮಾನ್‌ ರೆಹಮಾನ್‌ ಖಾನ್‌ನನ್ನು ಎನ್‌ ಐಎ ಅಧಿಕಾರಿಗಳು ಡಿ.9ವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.

Join Our Whatsapp Group

ನ.27ರಂದು ರವಾಂಡ ದೇಶದಲ್ಲಿ ಶಂಕಿತನನ್ನು ಬಂಧಿಸಲಾಗಿತ್ತು. ಬಳಿಕ ನ.28ರಂದು ಭಾರತಕ್ಕೆ ಬಂದಿದ್ದು, ಇದೀಗ ಗುರುವಾರ ಆರೋಪಿಯನ್ನು ನಗರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿ ಡಿ.9ರವರೆಗೆ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಶಂಕಿತ ಸಲ್ಮಾನ್‌ ಖಾನ್‌ ವಿರುದ್ಧ 2018ರಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, 2022ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಎಲ್‌ಐಟಿ ಮುಖ್ಯಸ್ಥ ಟಿ.ನಾಸೀರ್‌ ಪರಿಚಯವಾಗಿದೆ. ಈ ವೇಳೆಯೇ ಸಲ್ಮಾನ್‌ ಖಾನ್‌ ಮತ್ತು ತಲೆಮರೆಸಿಕೊಂಡಿರುವ ಜುನೈದ್‌ ಸೇರಿ ಕೆಲ ವ್ಯಕ್ತಿಗಳಿಗೆ ನಾಸೀರ್‌ ಉಗ್ರ ಸಂಘಟನೆ ಸೇರ್ಪಡೆ ಬಗ್ಗೆ ಪ್ರಚೋದನೆ ನೀಡಿದ್ದ. ಅಲ್ಲದೆ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಾಗಾಟ ಮತ್ತು ಸಂಗ್ರಹ ಬಗ್ಗೆಯೂ ಸೂಚಿಸಿದ್ದ. ಹೀಗಾಗಿ ಶಂಕಿತ ಸಲ್ಮಾನ್‌ ವಿರುದ್ಧ ಕಳೆದ ವರ್ಷ ಹೆಬ್ಟಾಳದಲ್ಲಿ ಬಂಧನಕ್ಕೊಳಗಾದ ಐವರು ಶಂಕಿತರಿಗೆ ಜೀವಂತ ಗ್ರೇನೇಡ್‌ ಪೂರೈಕೆ ಮಾಡಿದ್ದರು ಎಂಬ ಆರೋಪ ಇದೆ.