ಮನೆ ಅಪರಾಧ ಬೆಳಗಾವಿ: ಕಿಡಿಗೇಡಿಗಳಿಂದ ನಾಲ್ಕು ಬೈಕ್‍ಗಳಿಗೆ ಬೆಂಕಿ

ಬೆಳಗಾವಿ: ಕಿಡಿಗೇಡಿಗಳಿಂದ ನಾಲ್ಕು ಬೈಕ್‍ಗಳಿಗೆ ಬೆಂಕಿ

0

ಬೆಳಗಾವಿ (Belagavi): ಮನೆಗಳ ಮುಂದೆ ನಿಲ್ಲಿಸಿದ್ದ ನಾಲ್ಕು ಬೈಕ್ ಗಳಿಗೆ ಅಪರಿಚಿತ ಕಿಡಿಗೇಡಿಗಳು ಬೆಂಕಿ ಇಟ್ಟು ಪರಾರಿಯಾಗಿರುವ ಘಟನೆ  ನೆಹರು ನಗರದಲ್ಲಿ ನಡೆದಿದೆ.

ಅಪರಿಚಿತರು ಹಚ್ಚಿದ ಬೆಂಕಿಗೆ ನಾಲ್ಕು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಕುರಿತು ಎಪಿಎಂಸಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.