ಮನೆ ರಾಜ್ಯ ಕಾರ್ಯಕ್ರಮದಲ್ಲಿ ಅಲ್ಪ ಬದಲಾವಣೆ: ಮಹಾರಾಜ ಕಾಲೇಜು ಮೈದಾನಕ್ಕೆ ನೇರವಾಗಿ ಆಗಮಿಸಲಿರುವ ಪ್ರಧಾನಿ

ಕಾರ್ಯಕ್ರಮದಲ್ಲಿ ಅಲ್ಪ ಬದಲಾವಣೆ: ಮಹಾರಾಜ ಕಾಲೇಜು ಮೈದಾನಕ್ಕೆ ನೇರವಾಗಿ ಆಗಮಿಸಲಿರುವ ಪ್ರಧಾನಿ

0

ಮೈಸೂರು(Mysuru): ಪ್ರಧಾನಿ ನರೇಂದ್ರ ಮೋದಿ ಅವರು, ಮೈಸೂರಿಗೆ ಆಗಮಿಸುತ್ತಿರುವ ನಿಗದಿತ ಕಾರ್ಯಕ್ರಮದಲ್ಲಿ ಅಲ್ಪ ಬದಲಾವಣೆಯಾಗಿದೆ.

ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಕಾರ್ಯಕ್ರಮ ರದ್ದಾಗಿದ್ದು, ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ 6 ಗಂಟೆಗೆ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

ಸಮಾವೇಶ ಸ್ಥಳದ ಸಮೀಪ ಓವಲ್ ಗ್ರೌಂಡ್​​ನಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್​​ನಲ್ಲಿ ಸಂಜೆ 5.55ಕ್ಕೆ ಪ್ರಧಾನಿ‌ ಮೋದಿ ಬರಲಿದ್ದಾರೆ. ಅಲ್ಲಿಂದ ಕೇವಲ 5 ನಿಮಿಷಗಳಲ್ಲಿ ಮಹಾರಾಜ ಕಾಲೇಜು ಮೈದಾನದ ವೇದಿಕೆಗೆ ಪ್ರಧಾನಿ ಆಗಮಿಸಲಿದ್ದಾರೆ.