ಮನೆ ಸುದ್ದಿ ಜಾಲ ಭೀಕರ ದೋಣಿ ದುರಂತ ಸುಮಾರು 9 ಮಂದಿ ಸಾವು : ಜಬಲ್ಪುರ್

ಭೀಕರ ದೋಣಿ ದುರಂತ ಸುಮಾರು 9 ಮಂದಿ ಸಾವು : ಜಬಲ್ಪುರ್

0

ಮಧ್ಯಪ್ರದೇಶದ ಜಬಲ್ಪುರ್ ಸಮೀಪದ ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದೋಣಿ  ದುರಂತ  ಸಂಭವಿಸಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ ಎನ್ನಲಾಗಿದೆ. ನರ್ಮದಾ ನದಿಯಲ್ಲಿ ಪ್ರವಾಸಿಗರನ್ನು ಹೊತುಕೊಂಡು ಹೊಗುತ್ತಿದ್ದ ಕ್ರೂಸ್ ದೋಣಿಯು ಮಗುಚಿ ಬಿದ್ದ ಪರಿಣಾಮ ಸುಮಾರು  9 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಭೀಕರ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂಬ ಮಾಹಿತಿಬಂದಿದೆ.

ಗುರುವಾರ (ಏ 30) ರಂದು ಸಂಜೆ ಸಂಭವಿಸಿದ್ದು, ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಕ್ರೂಸ್ ದೋಣಿಯಲ್ಲಿ ಸುಮಾರು 40ರಿಂದ 45 ಮಂದಿ ಪ್ರಯಾಣಿಕರು ಇದ್ದರು ಎಂಬುದ್ದಾಗಿ ತಿಳಿದುಬಂದಿದೆ. ಅಚಾನಕ್ ಬಂದ ಭಾರೀ ಗಾಳಿ ಮತ್ತು ಮಳೆಯ ಪರಿಣಾಮವಾಗಿ ದೋಣಿ ನಿಯಂತ್ರಣ ಕಳೆದುಕೊಂಡು ಬರ್ಗಿ ಅಣೆಕಟ್ಟಿನ ಮಧ್ಯಭಾಗದಲ್ಲಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಈ ಗಾಳಿಯ ವೇಗ ಗಂಟೆಗೆ 60ರಿಂದ 70 ಕಿಲೋಮೀಟರ್ ತನಕ ಹೆಚ್ಚಾಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಈ ದುರಂತದಲ್ಲಿ ಇದುವರೆಗೆ 21 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮುಳುಗಿದ ದೋಣಿ ಜಲಾಶಯದಲ್ಲಿ ಸುಮಾರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಡೈವರ್‌ಗಳು, ದೋಣಿಗಳು ಮತ್ತು ಭಾರೀ ಯಂತ್ರೋಪಕರಣಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ದೋಣಿಯನ್ನು ತೀರದತ್ತ ಎಳೆಯಲು ಹಾಗೂ ಅದರ ಒಳಭಾಗಕ್ಕೆ ಪ್ರವೇಶಿಸಲು ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಸ್ಥಳೀಯ ಆಡಳಿತ ಸಕ್ರಿಯವಾಗಿ ಭಾಗವಹಿಸಿವೆ. ವೈಮಾನಿಕ ಕಣ್ಗಾವಲುಗಾಗಿ ವಿಶೇಷ ಹೆಲಿಕಾಪ್ಟರ್‌ಗಳನ್ನು ಕೂಡ ಬಳಸಲಾಗಿದೆ ಎನ್ನಲಾಗಿದೆ . ಆರಂಭದಲ್ಲಿ ಕತ್ತಲೆ ಮತ್ತು ಹವಾಮಾನ ವ್ಯತ್ಯಯದಿಂದಾಗಿ ಕಾರ್ಯಾಚರಣೆ ನಿಧಾನಗೊಂಡಿದ್ದರೂ, ಈಗ ಅದನ್ನು ಮತ್ತಷ್ಟು ವೇಗಗೊಳಿಸಲಾಗಿದೆ ಎನ್ನಲಾಗಿದೆ.

ಈ ದುರಂತದ ನಡುವೆ ಮನಕಲಕುವ ಘಟನೆಗಳೂ ಬೆಳಕಿಗೆ ಬಂದಿವೆ. ಒಂಬತ್ತನೇ ಶವ ಪತ್ತೆಯಾದ ವೇಳೆ, ಮೂರು ವರ್ಷದ ಮಗುವನ್ನು ತೋಳಿನಲ್ಲಿ ಬಿಗಿಯಾಗಿ ಹಿಡಿದಿದ್ದ ತಾಯಿಯ ಮೃತದೇಹ ಕಂಡುಬಂದಿದ್ದು, ರಕ್ಷಣಾ ಸಿಬ್ಬಂದಿಯೇ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಇಬ್ಬರೂ ಲೈಫ್ ಜಾಕೆಟ್ ಧರಿಸಿದ್ದರೂ, ದುರಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬದುಕುಳಿದವರು ನೀಡಿರುವ ಮಾಹಿತಿಯ ಪ್ರಕಾರ, ದೋಣಿಯಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳು ಅನುಸರಿಸಲ್ಪಟ್ಟಿಲ್ಲ ಎಂಬ ಆರೋಪ ಕೇಳಿಬಂದಿದೆ ಎನ್ನಲಾಗಿದೆ . ದೋಣಿ ಮುಳುಗಲು ಪ್ರಾರಂಭಿಸಿದ ನಂತರವೇ ಲೈಫ್ ಜಾಕೆಟ್‌ಗಳನ್ನು ವಿತರಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಸ್ಥಳೀಯ ಗ್ರಾಮಸ್ಥರು ಧಾವಿಸಿ ಬಂದು ಹಗ್ಗಗಳನ್ನು ಎಸೆದು ಹಲವರನ್ನು ರಕ್ಷಿಸಲು ಸಹಾಯ ಮಾಡಿದ್ದಾರೆ.

ಈ ದುರಂತದಲ್ಲಿ ಕುಟುಂಬಗಳ ಮೇಲೆ ಭಾರೀ ಪರಿಣಾಮ ಬಿದ್ದಿದೆ. ಖಮರಿಯಾ ಆರ್ಡಿನನ್ಸ್ ಫ್ಯಾಕ್ಟರಿಯ ಒಂದೇ ಕುಟುಂಬದ ಸುಮಾರು 15 ಮಂದಿ ಪ್ರವಾಸಕ್ಕೆ ಬಂದಿದ್ದು, ಇದುವರೆಗೆ ಓರ್ವ ಬಾಲಕನನ್ನು ಮಾತ್ರ ರಕ್ಷಿಸಲಾಗಿದೆ. ಆತನ ತಂದೆ ಕಾಮರಾಜ್ ಆರ್ಯ, ಪತ್ನಿ ಮತ್ತು ಇನ್ನೊಬ್ಬ ಮಗ ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು.ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ದುರಂತದ ಬಗ್ಗೆ ಸಂತಾಪ ಸೂಚಿಸಿದ್ದು ಎಂಬ ಮಾಹಿತಿ ಬಂದಿದೆ, ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಘಟನೆ ಕುರಿತು ಸಮಗ್ರ ತನಿಖೆ ನಡೆಸಿವಂತೆ ಆದೇಶಿಸಲಾಗಿದೆ ಎನ್ನಲಾಗಿದೆ.