ಮನೆ ಸುದ್ದಿ ಜಾಲ ಕಂದಕಕ್ಕೆ ಬಿದ್ದ ಕಾರು, ಆರು ಮಂದಿ ಸಾವು : ಹಿಮಾಚಲ ಪ್ರದೇಶ

ಕಂದಕಕ್ಕೆ ಬಿದ್ದ ಕಾರು, ಆರು ಮಂದಿ ಸಾವು : ಹಿಮಾಚಲ ಪ್ರದೇಶ

0

ಚಂಬಾ (ಹಿಮಾಚಲ ಪ್ರದೇಶ): ಪ್ರವಾಸಿ ತಾಣಗಳನ್ನು ವೀಕ್ಷಿಸಲೆಂದು ಗುಜರಾತ್​ನಿಂದ ಬಂದಿದ್ದ 9 ಜನರಿದ್ದ ಕರು 300 ಮೀಟರ್ ಆಳ ಕಂದಕಕ್ಕೆ ಉರುಳಿದ ಪರಿಣಾಮ ಚಾಲಕ ಸೇರಿ ಆರು ಜನ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸಂಭವಿಸಿದೆ. ಚಂಬಾ-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ತುನುಹಟ್ಟಿ ಪ್ರದೇಶದ ಕಾಕಿರಾ ಘರ್ ಬಳಿ ಕಾರು ಕಂದಕಕ್ಕೆ ಉರುಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಕಾರು ಧರ್ಮಶಾಲಾದಿಂದ ಡಾಲ್ಹೌಸಿಗೆ ತೆರಳುತ್ತಿತ್ತು. ಈ ಭೀಕರ ಅಪಘಾತದಲ್ಲಿ ಚಾಲಕ ಮತ್ತು ಗುಜರಾತ್‌ನ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದರೆ, ಕುಟುಂಬದ ಇತರೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಎಲ್ಲಾ ಪ್ರವಾಸಿಗರು ಗುಜರಾತ್‌ನ ಭಾವನಗರ ಜಿಲ್ಲೆಯ ನಿವಾಸಿಗಳಾಗಿದ್ದು, ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಬಂದಿದ್ದರು. ಎಲ್ಲಾ ಗಾಯಾಳುಗಳನ್ನು ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ, ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ತಾಂಡಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದರು. ಸೋಮವಾರ ಬೆಳಗಿನಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾರು ಧರ್ಮಶಾಲಾದಿಂದ ಡಾಲ್ಹೌಸಿಗೆ ಪ್ರಯಾಣಿಸುತ್ತಿತ್ತು. ಕಾಕಿರಾ ಘರ್ ಬಳಿ ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ನೇರವಾಗಿ ಆಳವಾದ ಕಂದಕಕ್ಕೆ ಉರುಳಿದೆ.

ಅಪಘಾತವು ಭಯಾನಕವಾಗಿದ್ದು, ಭೀತಿಯನ್ನು ಉಂಟುಮಾಡಿದೆ. ದೊಡ್ಡ ಶಬ್ಧವನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕತ್ತಲೆ ಮತ್ತು ನಿರಂತರ ಮಳೆಯ ನಡುವೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಪ್ರತಿಕೂಲ ಹವಾಮಾನ ಮತ್ತು ಕಂದಕದ ಆಳದ ಪರಿಣಾಮ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಸತತ ಪ್ರಯತ್ನದ ಬಳಿಕ ಗಾಯಾಳುಗಳು ಮತ್ತು ಮೃತದೇಹಗಳನ್ನು ಹೊರತೆಗೆಯಲಾಯಿತು. ಅಪಘಾತಕ್ಕೆ ಕೆಟ್ಟ ಹವಾಮಾನ ಮತ್ತು ಜಾರುವ ರಸ್ತೆಗಳು ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ನಿರಂತರವಾಗಿ ಮಳೆ ಬರುತ್ತಿದ್ದರಿಂದ ರಸ್ತೆ ತುಂಬಾ ಜಾರುತ್ತಿತ್ತು. ಚಾಲಕ ನಿದ್ರೆಗೆ ಜಾರಿ ವಾಹನದ ನಿಯಂತ್ರಣ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುರಕ್ಷತಾ ಗೋಡೆ ಇದ್ದಿದ್ದರೆ, ವಾಹನವು ಕಂದಕಕ್ಕೆ ಬೀಳುವುದನ್ನು ತಡೆಯಬಹುದಿತ್ತು ಮತ್ತು ಸ್ಥಳೀಯರು ಬೇಸರ ಹೊರಹಾಕುತ್ತಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಕ್ಲಾನಿ, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಮೃತರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ.