ಬೆಂಗಳೂರು: ನೀರು ಸರಬರಾಜು ಹಾಗೂ ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಜಲಮಂಡಳಿಯು ಜಾಗತಿಕ 5 ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿ ಆಯ್ಕೆಯಾಗಿದೆ. ಸ್ಪೇನ್ ದೇಶದ ಮ್ಯಾಡ್ರಿಡ್ನಲ್ಲಿ ಆಯೋಜಿಸಲಾಗಿರುವ ಪ್ರತಿಷ್ಠಿತ ‘ಗ್ಲೋಬಲ್ ವಾಟರ್ ಸಮಿಟ್ 2026’ ನಲ್ಲಿ 3 ಪ್ರಮುಖ ವಿಭಾಗಗಳಲ್ಲಿ ಜಾಗತಿಕ ಟಾಪ್ 5ರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನೀರು ಸರಬರಾಜು ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಲಮಂಡಳಿ ಪಾತ್ರವಾಗಿದೆ ಎಂದೇ ಹೇಳಲಾಗಿದೆ.
ಗ್ಲೋಬಲ್ ವಾಟರ್ ಸಮಿಟ್ನಲ್ಲಿ ಬೆಂಗಳೂರು ಜಲಮಂಡಳಿಯನ್ನು ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಪ್ರತಿನಿಧಿಸಿದ್ದರು. ಈ ವೇಳೆ ವಿಶ್ವದ ಪ್ರಮುಖ ಜಲ ನಿರ್ವಹಣಾ ನಾಯಕರು, ತಜ್ಞರನ್ನು ಭೇಟಿಯಾದ ಅವರು, ಬೆಂಗಳೂರಿನಲ್ಲಿ ಅಳವಡಿಸಿಕೊಂಡಿರುವ ನವೀನ ಜಲ ನಿರ್ವಹಣಾ ಕ್ರಮಗಳ ಬಗ್ಗೆ ಚರ್ಚಿಸಿದರು. ‘ಬೆಂಗಳೂರಿನಲ್ಲಿ ನೀರಿನ ಸದ್ಬಳಕೆ, ಮರುಬಳಕೆ ಹಾಗೂ ಸಮರ್ಥ ನಿರ್ವಹಣೆಗೆ ಜಲಮಂಡಳಿ ಅಳವಡಿಸಿಕೊಂಡ ಪಂಚಸೂತ್ರ ಮಾದರಿಯಾಗಿವೆ. ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಗುರಿ ಪಾಲಿಸುತ್ತಿರುವ ಜಲಮಂಡಳಿ ಮಾದರಿಗಳು ಗಮನ ಸೆಳೆದಿವೆ. ಈ ವಿಭಾಗದಲ್ಲಿ ಚಿಲಿ ದೇಶದ ಅಗುವಾಸ್ ನ್ಯೂವಾಸ್, ಮಲೇಷ್ಯಾದ ಇಂಡಾ ವಾಟರ್ ಕನ್ನೋರ್ಷಿಯಮ್, ಬ್ರೆಜಿಲ್ನ ಸನಾಸಾ, ಪರಾನಾದ ಸನೇಪರ್ ಸಂಸ್ಥೆಗಳ ಜೊತೆಗೆ ಜಲಮಂಡಳಿಯು ವಿಶ್ವದ ಐದರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂದಿದೆ ಎಂದು ಡಾ.ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ ಎನ್ನಲಾಗಿದೆ
ಈ ಮೂರು ವರ್ಷಗಳಲ್ಲಿ ನೀರು ಪೂರೈಕೆ, ನೈರ್ಮಲ್ಯ ಹಾಗೂ ಹೊಸ ತಂತ್ರಜ್ಞಾನಗಳ ಯಶಸ್ವಿ ಅಳವಡಿಕೆ ಪರಿಗಣಿಸಿ, ಜಲಮಂಡಳಿ ವಿಶ್ವದ ಅತ್ಯಂತ ಪ್ರತಿಷ್ಠಿತ ‘ಯುಟಿಲಿಟಿ ಆಫ್ ದಿ ಇಯರ್’ ಪ್ರಶಸ್ತಿಯ ಅಂತಿಮ ಐದರ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ. ಸಥರ್ನ್ ಕ್ಯಾಲಿಫೋರ್ನಿಯಾದ ಮೌಂಟೊನ್ ನಿಗ್ಯೂಲ್ ವಾಟರ್ ಡಿಸ್ಟ್ರಿಕ್ಟ್, ಸಬಾಸ್ಟೇ ಸಾವೋ ಪೌಲೋ, ಸೌದಿ ಅರೇಬಿಯಾದ ನ್ಯಾಷನಲ್ ವಾಟರ್ ಕಂಪನಿ ಸ್ಥಾನ ಹಂಚಿಕೊಂಡಿವೆ. ಇದರ ಜೊತೆಗೆ, ‘ಕಾವೇರಿ 5ನೇ ಹಂತ’ದ ಕುಡಿಯುವ ನೀರಿನ ಯೋಜನೆಯು ಸಹ ಪ್ರತ್ಯೇಕವಾಗಿ ಜಾಗತಿಕ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದು ಜಲ ನಿರ್ವಹಣಾ ತಜ್ಞರ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ. ಆದರಿಂದ ‘ವಾಟರ್ ಪ್ರಾಜೆಕ್ಟ್ ಆಫ್ ದಿ ಇಯರ್’ ವಿಭಾಗದಲ್ಲಿ ಚೀನಾದ ಹೈಕೋ ಜಿಯಾಂಗ್ಡಾಂಗ್ ನ್ಯೂ ಏರಿಯಾ ವಾಟರ್ ಟ್ರೇಟ್ಮೆಂಟ್ ಪ್ಲಾಂಟ್, ಸೂರತ್ ಅಡ್ವಾನ್ಸ್ ಅಲ್ಮಾಫಿಸ್ಟ್ರೇಷನ್ ಪ್ಲಾಂಟ್, ಫಿಲಿಪೈನ್ಸ್ನ ಅಪ್ಪರ್ ವಾವಾ ಬಲ್ಕ್ ವಾಟರ್ ಪ್ರಾಜೆಕ್ಟ್, ಸೆರ್ಬಿಯಾದ ಜೆರೆಂಜನಿನ್ ವಾಟರ್ ಟೀಟ್ಮೆಂಟ್ ಪ್ಲಾಂಟ್ ಯೋಜನೆಗಳ ಜೊತೆಯಲ್ಲಿ ಕಾವೇರಿ 5ನೇ ಹಂತದ ಯೋಜನೆಯೂ ಈ ಮನ್ನಣೆಗೆ ಪಾತ್ರವಾಗಿದ್ದಾರೆ ಎನ್ನಲಾಗುತ್ತಿದೆ.

















