ಟೆಹ್ರಾನ್ (ಇರಾನ್): ಇರಾನ್ ಜೊತೆಗಿನ ಸಂಘರ್ಷವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಧ್ಯವಾದ ಒಪ್ಪಂದದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಅಮೆರಿಕ, ಇಸ್ಲಾಮಿಕ್ ಸ್ಟೇಟ್ ಜೊತೆಗೆ ಪರೋಕ್ಷ ಮಾತುಕತೆಗೆ ಮುಂದಾಗಿದೆ ಎಂದು ಇರಾನ್ ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಗಳ ಪ್ರಕಾರ, ಎರಡು ದೇಶಗಳು ಈಗಾಗಲೇ ಕರಡು ಪ್ರತಿ ಮತ್ತು ಸಂದೇಶವನ್ನು ವಿನಿಮಯ ಮಾಡಿಕೊಂಡಿದೆ. ಈ ಮುಂಚೆ ಅಲ್ಜಜೀರಾಗೆ ಹೇಳಿಕೆ ನೀಡಿದ್ದ ಇರಾನ್ ಅಧಿಕಾರಿಗಳು ತಿಳಿವಳಿಕೆಯ ಮಾತುಕತೆ ಸಮೀಪ ಇರುವುದಾಗಿ ತಿಳಿಸಿದ್ದರು. ಮೊಹ್ಸಿನ್ ನಖ್ವಿ ಸದ್ಯ ಇರಾನ್ನಲ್ಲಿ ಹಾರ್ಮುಜ್ ಜಲಸಂಧಿಯ ಸ್ಥಿತಿಗತಿಯ ಕುರಿತು ಚರ್ಚಿಸಲಿದ್ದಾರೆ. ಜೊತೆಗೆ ತೀವ್ರವಾದ ಮಧ್ಯಸ್ಥಿಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ. ಈ ಅಂತಿಮ ಒಪ್ಪಂದವೂ ಅಂತಿಮ ಹಂತಕ್ಕೆ ತಲುಪಿದೆ ಎಂದು ನಿರ್ಧರಿಸುವುದಕ್ಕೆ ಈಗಲೇ ಸಾಧ್ಯವಿಲ್ಲ ಎಂದು ಕೂಡ ಅಲ್ಜಜೀರಾ ತಿಳಿಸಿದೆ. ವಾಷಿಂಗ್ಟನ್ ಪೋಸ್ಟ್ ಜೊತೆಗೆ ಮಾತನಾಡಿರುವ ಅಮೆರಿಕ ಅಧಿಕಾರಿಗಳು, ಪರಿಸ್ಥಿತಿಯು ಅಸಮತೋಲನವು ಜಾಗತಿಕ ಭದ್ರತೆಗೆ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತ್ತಾಗಿ ಇಸ್ರೇಲ್ ರಕ್ಷಿಸಲು ಅಮೆರಿಕ 200ಕ್ಕೂ ಹೆಚ್ಚು ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಇಂಟರ್ಸೆಪ್ಟರ್ಗಳನ್ನು ಮತ್ತು ಪೂರ್ವ ಮೆಡಿಟರೇನಿಯನ್ನಲ್ಲಿರುವ ನೌಕಾ ಹಡಗುಗಳಿಂದ ಹಾರಿಸಲಾದ 100ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಮಿಸೈಲ್-3 ಮತ್ತು ಸ್ಟ್ಯಾಂಡರ್ಡ್ ಮಿಸೈಲ್ – 6 ಇಂಟರ್ಸೆಪ್ಟರ್ಗಳನ್ನು ಉಡಾಯಿಸಿದೆ. ಇದರಿಂದಾಗಿ ಪೆಂಟಗನ್ನ ದಾಸ್ತಾನಿನ ಅರ್ಧದಷ್ಟು ಖಾಲಿಯಾಗಿದೆ ಈ ನಡುವೆ ಇಸ್ರೇಲ್ 100ಕ್ಕಿಂತ ಕಡಿಮೆ ಆರೋ ಇಂಟರ್ಸೆಪ್ಟರ್ಗಳನ್ನು ಮತ್ತು ಸುಮಾರು 90 ಡೇವಿಡ್ಸ್ ಸ್ಲಿಂಗ್ ಇಂಟರ್ಸೆಪ್ಟರ್ಗಳನ್ನು ಹಾರಿಸಿದೆ. ಅವುಗಳಲ್ಲಿ ಕೆಲವು ಯೆಮೆನ್ ಮತ್ತು ಲೆಬನಾನ್ನಲ್ಲಿ ಇರಾನ್ ಬೆಂಬಲಿತ ಗುಂಪುಗಳು ಹಾರಿಸಿದ ಕಡಿಮೆ ಅತ್ಯಾಧುನಿಕ ಸ್ಪೋಟಕಗಳನ್ನು ಹೊಡೆದುರುಳಿಸಲು ಈ ಇಂಟರ್ಸೆಪ್ಟರ್ ಗಳನ್ನು ಬಳಸಲಾಗಿದೆ ಇದಕ್ಕೂ ಮುನ್ನ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಯುರೇನಿಯಂ ಪುಷ್ಟೀಕರಣಕ್ಕೆ ನಾವು ಬಿಡುವುದಿಲ್ಲ.
ಅದನ್ನು ಅಲ್ಲಿಂದ ಪಡೆದ ಬಳಿಕ ನಾಶ ಮಾಡುತ್ತೇವೆ. ಶೀಘ್ರದಲ್ಲೇ ಅದು ಕೊನೆಯಾಗುತ್ತದೆ. ಈ ಎಲ್ಲ ಸಮಸ್ಯೆಗಳು ಬಗೆಹರಿದ ಮೇಲೆ ತೈಲ ಬೆಲೆಯಲ್ಲಿ ಹಿಂದೆಂದಿಗಿಂತಲೂ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. ಗುರುವಾರ ಈ ಬಗ್ಗೆ ಮಾತನಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಯುದ್ದ ಕೊನೆಗೊಳ್ಳುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರು ಟೆಹ್ರಾನ್ನಲ್ಲಿ ಮಾತುಕತೆಗೆ ಸಜ್ಜಾಗಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.


















