ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಹಳ್ಳಿಯಲ್ಲಿ ಆಘಾತಕಾರಿ, ಅಮಾನವೀಯ ಘಟನೆ ನಡೆದಿದೆ. ರಾತ್ರಿ ಶೆಡ್ ನಲ್ಲಿ ಮಲಗಿದ್ದ ಕುರಿಗಳ ಮೇಲೆ ಕಿಡಿಗಳು ಚಾಕು ಚೂರಿಗಳಿಂದ ಭೀಕರವಾಗಿ ದಾಳಿ ನಡೆಸಿ ವಿಕೃತಿ ಮರೆದಿದ್ದಾರೆ. ದೊಡ್ಡತಿಮ್ಮರಾಯಪ್ಪ ಎಂಬ ಬಡರೈತನಿಗೆ ಸೇರಿದ್ದ ಕುರಿಗಳು. ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ಬಡಪಾಯಿ. ಸುಮಾರು 50 ಕುರಿಗಳ ಸಾಕಿದ್ದ ಅವಳಿಗೆ ಹೆಂಚಿನ ಮನೆಯ ಶೆಡ್ ಕಟ್ಟಿದ್ದ. ರಾತ್ರಿ ಆ ಸೆಡ್ ನಲ್ಲಿ ಮಲಗಿದ್ದ ಕುರಿಗಳ ಮೇಲೆ ಕಿಡಿಗೇಡಿಗಳು ಚಾಕು ಚೂರಿಯಿಂದ ರಾತ್ರಿ ದಾಳಿ ನಡೆಸಿದ್ದಾರೆ ಎನ್ನಲಾಗುತಿದೆ.

ಮತ್ತು ಕುರಿಗಳ ಮೇಲೆ ಮನಬಂದಂತೆ ಇರಿದ್ದಾರೆ. ದಾಳಿಗೊಳಗಾದ ಪೈಕಿ 18 ಕುರಿಗಳ ಪೈಕಿ 5 ಕುರಿಗಳು ರಾತ್ರಿ ನರಳಾಡಿ ಪ್ರಾಣ ಬಿಟ್ಟಿವೆ. ಇನ್ನು ಕೆಲವು ಕುರಿಗಳಿಗೆ ಕತ್ತು ಸೀಳಿ ಬರ್ಬರವಾಗಿ ಹಲ್ಲೆ ನಡೆಸಿದ್ದು ಸಾವಿನ ಸಂಖ್ಯೆ ಹಚ್ಚುವ ಸಾದ್ಯತೆ ಇದೆ. ಈ ದೃಶ್ಯ ಗ್ರಾಮಸ್ಥರನ್ನೇ ಬೆಚ್ಚಿಬಿಳಿಸಿದೆ. ದುಷ್ಕರ್ಮಿಗಳು ತಡರಾತ್ರಿ ದಾಳಿ ನಡೆಸಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಹೀಗಾಗಿ ರಾತ್ರಿಯೆಲ್ಲ ಕುರಿಗಳು ತೀವ್ರ ರಕ್ತಸ್ರಾವವಾಗಿ ನರಳಾಡಿವೆ. ಬೆಳಗ್ಗೆ ಎಂದಿನಂತೆ ಮಾಲೀಕ ಕೊಟ್ಟಿಗೆಗೆ ಬಂದಾಗ ರಕ್ತಸಿಕ್ತವಾಗಿ ಬಿದ್ದಿದ್ದ ಭೀಕರ ದೃಶ್ಯ ಕಂಡು ಮಾಲೀಕ ಆಘಾತಕ್ಕೊಳಗಾಗಿದ್ದಾರೆ.

ಆದರೆ ಗಾಯಗಳಿಂದ ಬಳಲುತ್ತಿರುವ ಕುರಿಗಳು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ರೈತನ ಕಣ್ಣುಗಳು ನೀರು ನಿರಂತರವಾಗಿ ಸುರಿಯಿತ್ತಿದೆ. ಗಂಭೀರವಾಗಿ ಗಾಯಗೊಂಡ 18 ಕುರಿಗಳ ಪೈಕಿ ಈಗಾಗಲೇ 5 ಕುರಿಗಳು ಸಾವನ್ನಪ್ಪಿವೆ. ಉಳಿದ 13 ಕುರಿಗಳ ಸ್ಥಿತಿಯೂ ಗಂಭೀರವಾಗಿದ್ದು, ಇನ್ನಷ್ಟು ಕುರಿಗಳು ಸಾವನ್ನಪ್ಪುವ ಆತಂಕ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಾಸ್ತಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಕಿಡಿಗೇಡಿಗಳು ಯಾರು ಎಂಬುದರ ಬಗ್ಗೆ ತನಿಖೆ ಆರಂಭವಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

















